ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ(Kerala Vidhan Sabha Election) ಬಿಜೆಪಿ ಈ ಬಾರಿ ಖಾತೆ ತೆರೆದಿದೆ. ಕೊಲ್ಲಂ ಜಿಲ್ಲೆಯ ಚಾತನೂರು (Chathannoor) ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್(B. B. Gopakumar) ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಕ್ಷೇತ್ರದಲ್ಲಿ ಗೋಪಕುಮಾರ್ ಅವರು ಸಿಪಿಐ (CPI) ಅಭ್ಯರ್ಥಿ ಆರ್. ರಾಜೇಂದ್ರನ್ ಮಧ್ಯೆ ಸ್ಪರ್ಧೆ ಇತ್ತು. ಆದರೆ ಅಂತಿಮವಾಗಿ 3,686 ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಬಿ.ಬಿ. ಗೋಪಕುಮಾರ್ ಅವರು 46,567 ಮತಗಳನ್ನು ಪಡೆದರೆ ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಅವರು 42,881 ಮತಗಳನ್ನು ಪಡೆದರು.
ಚಾತನೂರು 2006 ರಿಂದ ಸಿಪಿಐನ ಭದ್ರಕೋಟೆಯಾಗಿತ್ತು. ಈ ಕೋಟೆಯನ್ನು ಈ ಬಾರಿ ಗೋಪಕುಮಾರ್ ಬೇಧಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಗೌರವ್ ಗೊಗೊಯ್‌ಗೆ ಹೀನಾಯ ಸೋಲು

2021 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸಿಪಿಐನ ಜಯಲಾಲ್ ಅವರು 17,206 ಮತಗಳ ಅಂತರಿಂದ ಜಯಗಳಿಸಿದ್ದರು. ಜಯಲಾಲ್ ಅವರಿಗೆ 59,296 ಮತಗಳು ಬಿದ್ದರೆ ಬಿಬಿ ಗೋಪಕುಮಾರ್ ಅವರಿಗೆ 42,090 ಮತಗಳು ಬಿದ್ದಿದ್ದವು. 2016 ರಿಂದ ಗೋಪಕುಮಾರ್ ಅವರು ಸ್ಪರ್ಧಿಸುತ್ತಿದ್ದು ಈ ಬಾರಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!
ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 101 ವಾರ್ಡ್‌ಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಏರಿತ್ತು.












