ಬೆಂಗಳೂರು: ಶುಕ್ರವಾರ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಕ್ಕೆ ಕಡೆಯ ಬಜೆಟ್ (Budget), ಎಲೆಕ್ಷನ್ ಬಜೆಟ್. ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಡುವ ಜನಪ್ರಿಯ ಯೋಜನೆಗಳನ್ನೊಳಗೊಂಡ ಬಜೆಟ್ ಕೊಡುವತ್ತ ಸಿಎಂ ಬೊಮ್ಮಾಯಿ ಚಿತ್ತವಿದೆ. ಎಲೆಕ್ಷನ್‌ಗೂ ಬೂಸ್ಟ್, ಪಕ್ಷಕ್ಕೂ ಬೂಸ್ಟ್ ಎಂಬ ಸೂತ್ರದ ಛಾಯೆ ಬಜೆಟ್ ಮೇಲೆ ಬೀಳುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಶುಕ್ರವಾರ ಬೆಳಗ್ಗೆ 10:30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ 2ನೇ ಬಜೆಟ್ ಮಂಡಿಸಲಿದ್ದಾರೆ. ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ ಎನ್ನಲಾಗಿದ್ದು, ಬಜೆಟ್ ಗಾತ್ರ ಸುಮಾರು 3 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ ಇದೆ. 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget 2023-24) ನಿರೀಕ್ಷೆಗಳೂ ಹೆಚ್ಚು, ಸವಾಲುಗಳೂ ಹೆಚ್ಚು. ಪಕ್ಕಾ ಚುನಾವಣಾ ಲೆಕ್ಕಾಚಾರಗಳೊಂದಿಗೆ ಆಯವ್ಯಯ ಮಂಡನೆಗೆ ಮುಂದಾಗಿದ್ದಾರೆ ಸಿಎಂ.
Advertisement
Advertisement
ಉಚಿತ ಘೋಷಣೆಗಳನ್ನೂ ಒಳಗೊಂಡ ಜನತೆಗೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಪ್ಲಾನ್ ಮಾಡಿದ್ದು, ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಜನಪ್ರಿಯ ಉಚಿತ ಸ್ಕೀಮ್‌ಗಳೂ ಹೆಚ್ಚಿರುವ ಸಾಧ್ಯತೆ ಇದೆ. ರೈತರು, ಕಾರ್ಮಿಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿ ವರ್ಗಗಳ ಕಲ್ಯಾಣಕ್ಕೆ ಒತ್ತು ಕೊಡುವ ಸಾಧ್ಯತೆ ಇದೆ.
Advertisement
ಬೊಮ್ಮಾಯಿ ಬಜೆಟ್ ನಿರೀಕ್ಷೆಗಳೇನು?
* ಕಾಂಗ್ರೆಸ್‌ನ ಗೃಹ ಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲು ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
* ಪ್ರತಿ ಕುಟುಂಬದ ಗೃಹಿಣಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
* ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ 3 ಲಕ್ಷದದಿಂದ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ.
* ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಗಳ ಮೂಲಕ ಸಾಲ ಯೋಜನೆ ಜಾರಿ ಸಾಧ್ಯತೆ.
* ರಾಜ್ಯದೆಲ್ಲೆಡೆ ನಮ್ಮ ಕ್ಲಿನಿಕ್‌ಗಳ ಹೆಚ್ಚಳ, ಹೋಬಳಿ ಮಟ್ಟದ ತನಕ ನಮ್ಮ ಕ್ಲಿನಿಕ್.
* ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ.
* ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಸಾಧ್ಯತೆ.
* ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಹಣ ಮೀಸಲಿಡುವ ಘೋಷಣೆ ಸಾಧ್ಯತೆ.
* ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಯೋಜನೆ ಘೋಷಣೆ ಸಾಧ್ಯತೆ.
* ಕುಲ ಕಸುಬು ಆಧಾರಿತ ಸಮುದಾಯಗಳಿಗೆ ಸಹಾಯಧನ ಸಾಧ್ಯತೆ.
* ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ ಸಾಧ್ಯತೆ. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ
Advertisement
ಈ ನಡುವೆ ಸಾಲ ಮನ್ನಾದಂತಹ ಬಜೆಟ್ ಘೋಷಣೆಗೆ ಕೈ ಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೆಲ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿರುವ ಸಾಲಮನ್ನಾಗೆ ಬೇಡಿಕೆ ಪ್ರಸ್ತಾಪ ಇದೆ. ಆದರೆ ಕೆಲ ಸಬ್ಸಿಡಿ ಇಳಿಕೆ ವಿಚಾರದಲ್ಲಿ ಕ್ರಮಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರದ ನಿಲುವು, ಸಾಲಮನ್ನಾ ಯೋಜನೆಗಿಂತ ಸುಧಾರಣಾ ಕ್ರಮಗಳತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಒಲವು ವ್ಯಕ್ತಪಡಿಸಿರುವ ಕಾರಣದಿಂದಾಗಿ ಸಾಲಮನ್ನಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
2018ರಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪೂರ್ಣ ಆಗಲಿಲ್ಲ. ಸಿದ್ದರಾಮಯ್ಯ ಅಧಿಕಾರ ಹೋಗಿ ಇನ್ನೊಂದು ಬಜೆಟ್ ಬಂತು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಇನ್ನೊಂದು ಬಜೆಟ್ ಆಗಿದ್ದು, ಅಂದು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದರು. ಹೀಗಾಗಿ ಬೊಮ್ಮಾಯಿ ಬಜೆಟ್ 4-5 ತಿಂಗಳ ಎಲೆಕ್ಷನ್ ಬಜೆಟ್ ಆಗಿದ್ದು, ಮುಂದೆಯೂ ಬಿಜೆಪಿ ಸರ್ಕಾರ ಬಂದರೆ ಮಾತ್ರ ಅವರ ಬಜೆಟ್ ಭದ್ರವಾಗಿರುತ್ತದೆ. ಒಟ್ಟಿನಲ್ಲಿ ಎಲೆಕ್ಷನ್ ಬಜೆಟ್ ಆದರೂ ಜನಪ್ರಿಯ ಯೋಜನೆಗಳ ಘೋಷಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಬೊಮ್ಮಾಯಿ ಕಡೆಯ ಆಟ ಹೇಗೆ ಜನರನ್ನು ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k