ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ ಗಂಟೆಗಳ ನಂತರ ಲಷ್ಕರ್ ಕಮಾಂಡರ್ (Lashkar Commander) ಶವವಾಗಿ ಪತ್ತೆಯಾಗಿದ್ದಾನೆ.
ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್, ಪ್ರಾರ್ಥನೆ ಸಲ್ಲಿಸಲು ಕುಬಾ ಮಸೀದಿಗೆ ಬರುವ ಮೊದಲು ಪರಿಚಯವಿಲ್ಲದ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ್ದ ಎಂದು ವರದಿಯಾಗಿದೆ. ನಂತರ ಅವರು ಇದ್ದಕ್ಕಿದ್ದಂತೆ ಮಸೀದಿಯ ದ್ವಾರದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಅನಾರೋಗ್ಯ ವದಂತಿ; ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಕುಟುಂಬಗಳಿಗೆ ನೆರವು ನೀಡುವ ಲಷ್ಕರ್ ಇಲಾಖೆಯ ಜವಾಬ್ದಾರಿಯನ್ನು ಖಾರಿ ಸಯೀದ್ ಹೊಂದಿದ್ದ.
ಪಾಕಿಸ್ತಾನದೊಳಗೆ ಅಪರಿಚಿತ ವ್ಯಕ್ತಿಗಳು ತಮ್ಮ ಸುಮಾರು 30 ಸದಸ್ಯರನ್ನು ಕೊಂದಿದ್ದಾರೆ ಎಂದು ಲಷ್ಕರ್ ಸಂಘಟನೆಯ ಉನ್ನತ ಕಾರ್ಯಕರ್ತನೊಬ್ಬ ಹೇಳಿದ್ದ. ಅದಾದ ಕೆಲವು ದಿನಗಳ ನಂತರ ಅಜೀಜ್ ಹಠಾತ್ ಸಾವಿನ ಸುದ್ದಿ ಬಂದಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್
2008 ರ ಮುಂಬೈ ದಾಳಿಯಲ್ಲಿ 166 ಜನರ ಸಾವಿಗೆ ಕಾರಣವಾದ ತಮ್ಮ ನಿಷೇಧಿತ ಸಂಘಟನೆಯ ಅನೇಕ ಸದಸ್ಯರು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಪಿಒಕೆಯ ವಿವಿಧ ಭಾಗಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ರಿಜ್ವಾನ್ ಹನೀಫ್ ಹೇಳಿರುವ ವೀಡಿಯೋ ವೈರಲ್ ಆಗಿದೆ.



