ನ್ಯೂಯಾರ್ಕ್: ಖಾದಿಯಿಂದ ತಯಾರಿಸಿದ ಸುಮಾರು 220 ಅಡಿ ಉದ್ದದ ಭಾರತದ ತ್ರಿವರ್ಣ ಧ್ವಜವು 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನ್ಯೂಯಾರ್ಕ್‌ನ ಐಕಾನಿಕ್ ಹಡ್ಸನ್ ನದಿಯ ಬಳಿ ಹಾರಾಡಲಿದೆ.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA) ಈ ವರ್ಷ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದನ್ನೂ ಓದಿ: ಕೋವಿಡ್ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ
Advertisement
Advertisement
ಆಗಸ್ಟ್ 15 ರಂದು ಐಕಾನಿಕ್ ಹಡ್ಸನ್ ನದಿ ತಟದ ಟೈಮ್ಸ್ ಸ್ಕ್ವೇರ್‌ನಲ್ಲಿ ಖಾದಿಯಿಂದ ಮಾಡಿದ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಸಂಭ್ರಮಾಚರಣೆ ಮಾಡಲಾಗುವುದು. ಪ್ರತಿವರ್ಷದಂತೆ ಈ ಬಾರಿಯೂ ಐಕಾನಿಕ್ ಎಂಪೈರ್ ಸ್ಟೇಟ್ ಕಟ್ಟಡವು ಭಾರತೀಯ ತ್ರಿವರ್ಣ ಧ್ವಜವನ್ನು ಬೆಳಗಲಿದೆ.
Advertisement
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತೀಯರ ಸಂಘಟನೆಯು ಆಗಸ್ಟ್ 15 ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ಬೃಹತ್ ‘ಇಂಡಿಯಾ ಡೇ ಪರೇಡ್’ ಜಾಹೀರಾತು ಫಲಕವನ್ನು ಪ್ರದರ್ಶಿಸಲಿದೆ ಎಂದು ಎಫ್‌ಐಎ ತಿಳಿಸಿದೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ
Advertisement
ನಮ್ಮ ಇಡೀ ತಂಡ ಮತ್ತು ಭಾರತೀಯ-ಅಮೆರಿಕನ್ ಸಮುದಾಯವು ಈ ವರ್ಷ ಭಾರತದ 75ನೇ ಸ್ವಾತಂತ್ರ್ಯವನ್ನು ಭವ್ಯ ಆಚರಣೆಗಳೊಂದಿಗೆ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಎಫ್‌ಐಎ ಹೇಳಿದೆ.