ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುವ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಬೃಹತ್ ಕೈಗಾರಿಕಾ ಸಚಿವ ಆರ್. ವಿ ದೇಶಪಾಂಡೆ ಗರಂ ಆಗಿ ನಿಮಗೆ ತೋಚಿದಂತೆ ಬರೆದುಕೊಳ್ಳಿ ಎಂದು ಉತ್ತರಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಈಗಾಗಲೇ ಪ್ರಶ್ನೆ ಕೇಳಿದ್ದೇನೆ. ಪದೇ ಪದೇ ಈ ವಿಚಾರವನ್ನು ಹೈಲೈಟ್ ಮಾಡುವುದು ಸರಿಯಲ್ಲ. ನಾನೂ ಹಿಂದೆ ಪಕ್ಷ ಬಿಟ್ಟು ಬಂದವನೇ. ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.
Advertisement
ಮೋದಿಯವರು ಈಗ ನನಗೆ ಪರಿಚಯ ಆಗಿರಬಹುದು. ಆದರೆ ಸಿದ್ದರಾಮಯ್ಯ 30 ವರ್ಷದಿಂದ ಪರಿಚಯ. ಹೀಗಾಗಿ ನೀವು ನಿಮಗೆ ಹೇಗೆ ಬೇಕೋ ಹಾಗೇ ಬರೆದುಕೊಳ್ಳಿ ಸಿಡಿಮಿಡಿಗೊಂಡು ಉತ್ತರಿಸಿದರು.
Advertisement
ಸರಬರಾಜುದಾರರ ಅಭಿವೃದ್ಧಿ ಹಾಗು ಹೂಡಿಕೆದಾರರ ಶೃಂಗಸಭೆ ಯಶಸ್ವಿಯಾಗಿದ್ದು, 20,499 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು ಬಂದಿವೆ. 86,750 ಉದ್ಯೋಗ ಸೃಷ್ಟಿಯಾಗಲಿದೆ. ಕೆಐಎಡಿಬಿ ಯಲ್ಲಿ 11 ಸೇವೆಗಳನ್ನು ಸಕಾಲ ಅಡಿ ತರಲಾಗಿದ್ದು, ಉದ್ಯಮಕ್ಕೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
Advertisement
ರಾಜ್ಯದಲ್ಲಿ ಇನ್ನೂ ಚೆಕ್ ಪೋಸ್ಟ್ ಅಸ್ತಿತ್ವದಲ್ಲಿದ್ದು ಅಲ್ಲಿ ವಸೂಲಿ ನಡೆಯುತ್ತಿದೆ ಎನ್ನುವ ಆರೋಪಕ್ಕೆ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ಯಾವುದೂ ಇಲ್ಲ ಎಂದು ದೇಶಪಾಂಡೆ ಸ್ಪಷ್ಟನೆ ನೀಡಿದರು. (ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ)
Advertisement
ಜಿಎಸ್ ಟಿ ಯಿಂದ ರಾಜ್ಯದ ಕೈಗಾರಿಕಾಗಳಿಗೆ ತೊಂದರೆಯಾಗಿದೆ ಅದರಲ್ಲೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಪಟ್ಟಿಯೊಂದು ಹರಿದಾಡುತ್ತಿದ್ದು, ಈ ಪಟ್ಟಿಯಲ್ಲಿ ದೇಶಪಾಂಡೆ ಹೆಸರಿದೆ. ಹೀಗಾಗಿ ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ದೇಶಪಾಂಡೆ ಅವರು ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ಧಾಂತ ಮತ್ತು ಜನಪರ ಯೋಜನೆಗಳು ಬೇರೆ ಯಾವ ಪಕ್ಷದಲ್ಲಿ ಇಲ್ಲ ಎಂದು ಉತ್ತರಿಸಿ ಸ್ಪಷ್ಟನೆ ನೀಡಿದರು.
Hon'ble Minister @RV_Deshpande addressing the Press Meet to highlight some important Achievements & Updates pertaining to the Industries Department, KIADB etc. in Vidhana Soudha pic.twitter.com/XZeublLSL6
— Invest in Karnataka (@investkarnataka) November 30, 2017
Sincere thank to all the Exhibitors, Industry Associations, Delegates, Partners and all the Government departments, bureaucrats and officials for their support in making Vendor Development and Investor Summit 2017 – a huge success pic.twitter.com/HGFcAS1MKP
— R V Deshpande (@RV_Deshpande) November 25, 2017