ಧಾರವಾಡ: ವಿಧಾನಸೌಧ ವಜ್ರಮಹೋತ್ಸವದ ಕಾರ್ಯಕ್ರಮ ಬಹಳ ಸರಳವಾಗಿ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಸಹ ಕಾರ್ಯಕ್ರಮದ ಬಜೆಟ್ ಕಡಿಮೆ ಮಾಡಿದ್ದಾರೆ. ವಜ್ರಮಹೋತ್ಸವದಲ್ಲಿ ಚಿನ್ನದ ಬಿಸ್ಕಟ್ ನೀಡುತ್ತಾರೋ ಅಥವಾ ಬ್ರಿಟಾನಿಯಾ ಬಿಸ್ಕಟ್ ನೀಡುತ್ತಾರೋ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಆರ್‍ವಿ ದೇಶಪಾಂಡೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆ ನಗರದ ಹೊರವಯದಲ್ಲಿರುವ ಕೃಷಿ ವಿವಿ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಸರ್ಕಾರದ 4 ಜನ ಸಚಿವರು ಇಂದು ಪೂರ್ವಭಾವಿ ಸಿದ್ಧತೆಗಳನ್ನ ಪರಿಶೀಲನೆ ನಡೆಸಿ, ಈ ವೇಳೆ ವಾರ್ತಾ ಇಲಾಖೆಯ ಪ್ರಚಾರ ವಾಹನಕ್ಕೆ ಆರ್ ದೇಶಪಾಂಡೆ, ವಿನಯ್ ಕುಲಕರ್ಣಿ, ಎಚ್‍ಕೆ ಪಾಟೀಲ್ ಹಾಗೂ ರುದ್ರಪ್ಪ ಲಮಾಣಿ ಚಾಲನೆ ನೀಡಿದ್ದಾರೆ.
Advertisement
ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಇನ್ನು ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನಿಸುತ್ತಿದ್ದಾರೆ. ಅವರು ಇಲ್ಲೆ ಬಂದು ನೋಡಿ ಮಾತನಾಡಲಿ ಎಂದು ಹೇಳಿದರು. ಇನ್ನು ಎಲ್ಲ ಪಕ್ಷಗಳು ಚುನಾವಣೆ ದೃಷ್ಟಿ ಇಟ್ಟುಕೊಂಡೇ ಕಾರ್ಯಕ್ರಮ ಮಾಡುತ್ತಾರೆ. ಗುಜರಾತ್ ನಲ್ಲಿ ಅಲ್ಲಿಯ ಸರ್ಕಾರ ಮಾಡಿಲ್ಲವೇ ? ಇನ್ನು ಗುಜರಾತ್ ಸರ್ಕಾರ ರೈತರಿಗೆ 3 ಶೇಕಡಾ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಆದರೆ ನಮ್ಮ ಸರ್ಕಾರ ರೈತರಿಗೆ ಬಡ್ಡಿ 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಪ್ರಧಾನಿ ಮೋದಿ ಟೀಕೆ ಟಿಪ್ಪಣಿ ಮಾಡ್ತಾರೆ ಅದು ಪ್ರಚಾರವಲ್ಲವೇ ಎಂದು ಪ್ರಶ್ನಿಸಿದರು.