ಚೆನ್ನೈ: ಸಮುದ್ರದ ಗಡಿ ದಾಟಿರುವ ಆರೋಪದ ಮೇಲೆ ಶ್ರೀಲಂಕಾ ನೌಕಾ ಪಡೆ ತಮಿಳುನಾಡಿನ 2 ದೋಣಿಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿದ್ದ 21 ಮೀನುಗಾರರನ್ನು ಬಂಧಿಸಿದ್ದಾರೆ.
ಜನವರಿ 21ರಂದು ನಾಗಪಟ್ಟಣಂ ಮೂಲದ ಸಾವಿರಾರು ಮೀನುಗಾರರು ಸುಮಾರು 400 ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶ್ರೀಲಂಕಾದ ಫೈಬರ್ ಬೋಟ್ ಒಂದಕ್ಕೆ ತಮಿಳುನಾಡಿನ ಮೀನುಗಾರರ ದೋಣಿಯೊಂದು ಡಿಕ್ಕಿ ಹೊಡೆದಿದೆ. ಇದಕ್ಕೆ ಪ್ರತಿಕಾರವಾಗಿ ಶ್ರೀಲಂಕಾದ ಮೀನುಗಾರರು ತಮಿಳು ಮೀನುಗಾರರನ್ನು ಸುತ್ತುವರೆದಿದ್ದಾರೆ ಎಂದು ಪ್ರಾರಂಭದಲ್ಲಿ ವರದಿಯಾಗಿತ್ತು.
ಇದೇ ಸಂದರ್ಭದಲ್ಲಿ ಶ್ರೀಲಂಕಾದ ಪರುತಿತುರೈ ಕಡಲತೀರದಲ್ಲಿ ಮೀನುಗಾರನೊಬ್ಬನ ಶವ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಶ್ರೀಲಂಕಾ ಮೀನುಗಾರರು ಪ್ರತಿಭಟನೆ ನಡೆಸಿ ನಂತರ ತಮಿಳು ಮೀನುಗಾರರ ದೋಣಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ತಮಿಳು ಮೀನುಗಾರರನ್ನು ಸುತ್ತುವರೆದಾಗ ಕಲ್ಲು ಮತ್ತು ಪೆಟ್ರೋಲ್ ಬಾಂಬ್‌ಗಳಿಂದ ದಾಳಿ ಮಾಡಿದ್ದಾರೆ ಎಂದು ಶ್ರೀಲಂಕಾ ಮೀನುಗಾರರು ಆರೋಪಿಸಿದ್ದಾರೆ. 2 ದೋಣಿಗಳನ್ನು ವಶಪಡಿಸಿಕೊಂಡು, 21 ತಮಿಳು ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆ ಇಂದು ಅವರನ್ನು ಯಜ್ಪಾನಮ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?