ಡೆಹರಾಡೂನ್: ಉತ್ತರಾಖಂಡ್ ನ ಚಂಪಾವತ್ ಸ್ವಾಲಾ ಬಳಿ ಸೋಮವಾರ ಭೂಕುಸಿತವಾಗಿ ಹೆದ್ದಾರಿ ಬಂದ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಟನಕ್‍ಪುರ-ಚಂಪಾವತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Advertisement
ವೀಡಿಯೋ ವೈರಲ್:
ಬೆಟ್ಟ ಮೇಲ್ಭಾಗದಿಂದ ಹಂತ ಹಂತವಾಗಿ ಕುಸಿಯುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭೂಕುಸಿತ ಆಗ್ತಿರೋದು ಗೊತ್ತಾಗುತ್ತಿದ್ದಂತೆ ಜನರು ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹಿಂದೆ ಬೆಟ್ಟ ಕುಸಿಯುತ್ತಿದ್ದರೆ ಮುಂದೆ ಜನ ಓಡಿ ಬರುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಯುದ್ಧದಲ್ಲಿ ಸಹಾಯ ಮಾಡಿದ ಅಫ್ಘನ್ನರಿಗೆ ಅಮೆರಿಕದಲ್ಲಿ ಆಶ್ರಯ: ಜೋ ಬೈಡನ್ ಘೋಷಣೆ
Advertisement
Today its Chalthi on Tanakpur- Champawat highway.. https://t.co/Pr6VdhhWUd pic.twitter.com/PVB93Q65gn
— Deep Upadhyay (@DeepUpadhyaay) August 23, 2021
Advertisement
ಉತ್ತರಾಖಂಡದಲ್ಲಿ ಶುಕ್ರವಾರ 14 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ಭೂಕುಸಿತದ ಅಪಾಯದಿಂದ ಪಾರಾಗಿತ್ತು. ಈ ಬಸ್ ನೈನಿತಾಲ್ ಗೆ ಹೊರಟಿತ್ತು. ಬೆಟ್ಟದ ಒಂದು ದೊಡ್ಡ ಭಾಗ ಕುಸಿತವಾಗಿದ್ದರಿಂದ ನೈನಿತಾಲ್-ಜ್ಯೂಲಿಜಕೊಟ್-ಕರ್ಣಪ್ರಯಾಗ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸಂಚಾರ ಬಂದ್ ಆಗಿದೆ. ಇದಕ್ಕೂ ಮೊದಲು ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಆಗಸ್ಟ್ 11ರಂದು ಉಂಟಾದ ಭೂಕುಸಿತದಲ್ಲಿ 14 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ