ಬೆಂಗಳೂರು: ಹಾಸನ-ಮಂಗಳೂರು ( Hassana-Mangaluru) ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಗಿದೆ
ಇಂದು ಮುಂಜಾನೆ ಬಾಳುಪೇಟೆ ಹಾಗೂ ಸಕಲೇಶಪುರ (Sakleshpura) ಮಧ್ಯೆ ಭೂಕುಸಿತವಾಗಿದ್ದು ಹಳಿ ಮೇಲೆ ಮಣ್ಣುಗಳು ನಿಂತಿವೆ. ಭೂಕುಸಿತದಿಂದಾಗಿ ಶುಕ್ರವಾರ ರಾತ್ರಿ ಹೊರಟ್ಟಿದ್ದ ಬೆಂಗಳೂರು ಕಣ್ಣೂರು ಎಕ್ಸ್‌ಪ್ರಸ್ (Kannur Express) ಮತ್ತು ಬೆಂಗಳೂರು ಮುರುಡೇಶ್ವರ ಎಕ್ಸ್‌ಪ್ರೆಸ್ (Murdeshwar Express) ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Advertisement
Advertisement
ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದ್ದು ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಈಗ ಆರು ರೈಲುಗಳು ನಿಂತಿವೆ. ಮಧ್ಯರಾತ್ರಿಯಿಂದ ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್
Advertisement
ಭಾರೀ ಮಳೆ ಸುರಿದ ಪರಿಣಾಮ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಉಂಟಾಗಿರುವ ಕಾರಣ ರೈಲು ಸಂಚಾರ ಸ್ಥಗಿತವಾಗಿತ್ತು. ಗುರುವಾರ ಮತ್ತೆ ರೈಲು ಸಂಚಾರ ಆರಂಭವಾಗಿತ್ತು. ಈಗ ಮತ್ತೆ ಹಾಸನ ಭಾಗದಲ್ಲಿ ಹಳಿ ಮೇಲೆ ಗುಡ್ಡ ಕುಸಿದಿದೆ.
Advertisement