– ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಸಂಭ್ರಮ
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಸಂಭ್ರಮ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದೆ.
Advertisement
Advertisement
ಭಾನುವಾರ ಬೆಂಗಳೂರಿನ ರಾಜಾಜಿನಗದರದಲ್ಲಿ ನಡೆದ ‘Landmarks of Sandalwood- ಚಂದನವನದ ಚಿಲುಮೆಗಳು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ಟಿ.ಎಸ್.ನಾಗಭರಣ, ನಾಗತಿಹಳ್ಳಿ ಚಂದ್ರಶೇಖರ್, ನಟ ಶ್ರೀಮುರುಳಿ ಸೇರಿದಂತೆ ಕನ್ನಡ ಸಿನಿರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು.
Advertisement
Advertisement
ಪತ್ರಕರ್ತ ಎಸ್.ಶ್ಯಾಮ್ ಪ್ರಸಾದ್ ಹಾಗೂ ಪಬ್ಲಿಕ್ ಟಿವಿ ಸಿನಿಮಾ ಬ್ಯೂರೋದ ಮುಖ್ಯಸ್ಥ ಡಾ. ಶರಣು ಹುಲ್ಲೂರು ಅವರು ಈ ಚಂದನವನದ ಚಿಲುಮೆಗಳು ಪುಸ್ತಕವನ್ನ ಬೆರೆದಿದ್ದಾರೆ. 90 ವರ್ಷದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿರೋ 90 ಚಿತ್ರಗಳ ಬಗ್ಗೆ ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಗಳನ್ನ ದಾಖಲಿಸಿದ್ದಾರೆ.