ಕೋಲಾರ: 10 ದಿನಗಳ ಪ್ರವಾಸಕ್ಕಾಗಿ ನೇಪಾಳದ (Nepal) ಕಠ್ಮಂಡುವಿಗೆ (Kathmandu) ತೆರಳಿದ್ದ ಪ್ರಯಾಣಿಕರು ಬೆಂಗಳೂರಿನಿಂದ 26ರಂದು ತೆರಳಿ ಮತ್ತೆ ಮಾರ್ಚ್ 7ಕ್ಕೆ ವಾಪಸ್ ಆಗಬೇಕಾಗಿತ್ತು. ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನಗಳ ಯಡವಟ್ಟಿನಿಂದ ಸುಮಾರು 188 ಪ್ರಯಾಣಿಕರು 22 ಗಂಟೆಗಳ ಕಾಲ ವಿಮಾನದಲ್ಲೇ ಪರದಾಡಿದ್ದಾರೆ. ಕೋಲಾರದಿಂದ (Kolar) ತೆರಳಿದ್ದ 29 ಪ್ರವಾಸಿಗರು ಪ್ರವಾಸವೂ ಬೇಡ ವಿಮಾನದ ಸಹವಾಸವೂ ಬೇಡ ಎಂದು ವಾಪಸ್ ಮನೆ ಸೇರಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಎರಡು ದಿನಗಳ ಕಾಲ ವಿಮಾನದಲ್ಲೇ ಪರದಾಡಿ ನರಕ ಅನುಭವಿಸುವಂತಾಗಿತ್ತು. ಕಠ್ಮುಂಡುವಿಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೇ ವಿಮಾನದಲ್ಲೇ 22 ಗಂಟೆಗಳ ಕಾಲ ಅನ್ನ, ನೀರು ಇಲ್ಲದೆ ಸುತ್ತಾಡಿದ್ದಾರೆ. ಗುರುವಾರ ಬೆಳಗ್ಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ಬೆಳಗ್ಗೆ 10:30ಕ್ಕೆ 188 ಪ್ರಯಾಣಿಕರನ್ನ ಹೊತ್ತು ಸಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಧ್ಯಾಹ್ನ 1:30ಕ್ಕೆ ನೇಪಾಳದ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷದ ನೆಪದಿಂದ ಲ್ಯಾಂಡಿಂಗ್‌ಗೆ ಅನುಮತಿ ಸಿಗಲಿಲ್ಲ ಅನ್ನೋ ಕಾರಣಕ್ಕೆ ವಾರಣಾಸಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಾರಣಾಸಿಯಿಂದ ಗುರುವಾರ ರಾತ್ರಿಯೇ 9:30ಕ್ಕೆ ಬೆಂಗಳೂರಿಗೆ ವಾಪಸ್ ಆಗಿದೆ. ಶುಕ್ರವಾರ ಬೆಳಗ್ಗೆ 12 ಗಂಟೆಗೆ ಮತ್ತೆ ಕಠ್ಮಂಡುವಿಗೆ ವಿಮಾನ ಟೇಕಾಫ್ ಆಗಿದ್ದು, ಶುಕ್ರವಾರವೂ ಸಹ ಹವಮಾನ ವೈಪರೀತ್ಯ ಅಂತ ಕಠ್ಮಂಡುವಿನಲ್ಲಿ ಲ್ಯಾಂಡಿಂಗ್‌ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ, ಮರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ಬರಲಾಗಿದೆ. ಇದನ್ನೂ ಓದಿ: ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಕಲಿಸಬೇಕು: ಸಿದ್ದರಾಮಯ್ಯ
ಲ್ಯಾಂಡಿಂಗ್ ಸಮಸ್ಯೆಯಿಂದಾಗಿ ವಿಮಾನದಲ್ಲೇ ಪ್ರಯಾಣಿಕರು ಪರದಾಡಿದ್ದು, ವಿಮಾನದಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳು ಸರಿಯಾಗಿ ಊಟ, ತಿಂಡಿ, ನೀರಿನ ವ್ಯವಸ್ಥೆ ಇಲ್ಲದೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರಿಯಕರನೂ ನೇಣಿಗೆ ಶರಣು
ವಿಮಾನದಲ್ಲೇ ಸುತ್ತಾಡಿ ಸುಸ್ತಾದ ಪ್ರಯಾಣಿಕರು ಪ್ರವಾಸವೂ ಬೇಡ, ವಿಮಾನದ ಸಹವಾಸ ಬೇಡವೇ ಬೇಡ ಎಂದು ಇಂದು ಕೋಲಾರದತ್ತ ಮುಖ ಮಾಡಿದ್ದಾರೆ. ಕೋಲಾರದಿಂದ ತೆರಳಿದ್ದ 29 ಪ್ರವಾಸಿಗರು ಸದ್ಯ ವಾಪಸ್ ಆಗಿದ್ದಾರೆ. ತಡರಾತ್ರಿಯೂ ಸಮಸ್ಯೆ ಸರಿ ಹೋಗದ ಹಿನ್ನೆಲೆಯಲ್ಲಿ ಕೊನೆಗೆ ಪ್ರಯಾಣ ಬೇಡ ಎಂದು ಪ್ರವಾಸ ಮೊಟಕು ಗೊಳಿಸಿ ಕೋಲಾರಕ್ಕೆ ವಾಪಸ್ ಬಂದಿಳಿದ್ದಾರೆ. ಇದನ್ನೂ ಓದಿ: ಅಬುಧಾಬಿ, ದೋಹಾ, ರಿಯಾದ್ ಮೇಲೆ ಇರಾನ್ ದಾಳಿ – ದುಬೈನಲ್ಲೂ ಸ್ಫೋಟ
ಇದೆ 26ರಂದು 10 ದಿನಗಳ ಪ್ರವಾಸಕ್ಕಾಗಿ ಕೋಲಾರದಿಂದ ಹೊರಟಿದ್ದರು. ಆದರೆ ಕಳೆದ 38 ಗಂಟೆಗಳಲ್ಲಿ 22 ಗಂಟೆಗಳ ಕಾಲ ವಿಮಾನದಲ್ಲೇ ಕಳೆದು ವಾಪಸ್ ಆದವರು ಅದೊಂದು ನರಕ, ನಾವು ವಾಪಸ್ ಆಗುತ್ತೇವೆ ಎಂದುಕೊಂಡಿರಲಿಲ್ಲ ಎಂದು ಮನೆ ಸೇರಿದ್ದಾರೆ. 10 ದಿನಗಳಿಗೆ 36 ಜನರಿಗೆ 20 ಲಕ್ಷ ರೂ. ಪ್ರವಾಸದ ಪ್ಯಾಕೇಜ್ ಇದಾಗಿದ್ದು, ಊಟ-ವಸತಿ ವ್ಯವಸ್ಥೆ ಸೇರಿದಂತೆ ರಿಟರ್ನ್ ವಿಮಾನದ ಟಿಕೇಟ್ ಸಹ ಬುಕ್ ಮಾಡಿದ್ದೇವೆ. ಆದರೆ ಈಗ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಅನ್ನೋದು ಕೋಲಾರದ ಪ್ರವಾಸಿ ವ್ಯವಸ್ಥಾಪಕರ ಮಾತಾದ್ರೆ, ಉಳಿದಂತೆ 188 ಪ್ರಯಾಣಿಕರು ಬೇರೆ ಬೇರೆ ಉದ್ದೇಶಗಳಿಗೆ ಜಪಾನ್ ತೆರಳಿದ್ರು, ಅವರೆಲ್ಲಾ ಈಗ ನಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ವಿಮಾನ ಸಂಸ್ಥೆಯೆ ನೇರ ಹೊಣೆ ಎಂದಿದ್ದಾರೆ ಪ್ರವಾಸಿ ವ್ಯವಸ್ಥಾಪಕ. ಇದನ್ನೂ ಓದಿ: ಎರಡನೇ & 4ನೇ ಶನಿವಾರ ರಜೆ ಕೊಡಿ – ಪ್ರಾಥಮಿಕ ಶಿಕ್ಷಕರಿಂದ ಸಿಎಂಗೆ ಮನವಿ
ಸದ್ಯ ನೇಪಾಳಕ್ಕೆ ತೆರಳುವ ಪ್ರಯಾಣಿಕರಿಗೆ ವಿಮಾನಗಳ ವ್ಯತ್ಯಾಸದಿಂದ ಸಾಕಷ್ಟು ತೊಂದರೆಯಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ – 96.87% ಹಾಜರಾತಿ ದಾಖಲು

