ಮೈಸೂರು: ಜಮೀನು ವಿವಾದದಲ್ಲಿ (Land Dispute) ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದ ವೇಳೆ ಕೊಲೆ ಬೆದರಿಕೆ ಹಾಕಿದ 8 ಮಂದಿ ವಿರುದ್ದ ಎಫ್‌ಐಆರ್ ದಾಖಲಾದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಎಂಬುವವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದೇ ಗ್ರಾಮದ ಸ್ವಾಮಿ, ವಸಂತ, ಅರ್ಜುನ, ಶಾಂತಮ್ಮ, ರವಿ, ಸಿದ್ದರಾಜು, ನಾಗರಾಜು ಹಾಗೂ ಸಿದ್ದಯ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್
ಕೊಳಘಟ್ಟ ಗ್ರಾಮದ ಸರ್ವೆ ನಂ.73 ರ 4 ಎಕ್ರೆ ಜಮೀನಿನ ವಿಚಾರದಲ್ಲಿ ರತ್ನಮ್ಮ ಹಾಗೂ ಸ್ವಾಮಿ ಕುಟುಂಬದ ನಡುವೆ ವಿವಾದ ಇದ್ದು ಜಮೀನು ಸರ್ವೆ ನಡೆಸುವಂತೆ ರತ್ನಮ್ಮ ಮನವಿ ಮಾಡಿದ್ದರು. ಇದನ್ನೂ ಓದಿ: ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ
ಈ ಹಿನ್ನೆಲೆ ಪರಿಶೀಲನೆ ನಡೆಸಲು ಗ್ರಾಮ ಲೆಕ್ಕಿಗ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಂದ ಸ್ವಾಮಿ ಸೇರಿದಂತೆ 8 ಮಂದಿಜಮೀನು ಪರಿಶೀಲನೆ ನಡೆಸಲು ಬಿಡದೆ ಗಲಾಟೆ ಮಾಡಿದ್ದಾರೆ. ಈ ವೇಳೆ ರತ್ನಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಚೇರಿಯಲ್ಲೇ ಕುಳಿತು ಆನೆಗಳನ್ನು ಕಾಡಿಗಟ್ಟಲು ಪ್ಲ್ಯಾನ್ – `ಡಿವೈಸ್’ ಬಳಕೆಗೆ ಮುಂದಾದ ಅರಣ್ಯ ಇಲಾಖೆ!