ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಎಲ್ಲೋ ಒಂದು ಕಡೆ ಲ್ಯಾಂಡ್ ಅಲಾಟ್ ಆಗಿದೆಯಂತೆ. ನನ್ನ ಕಡೆ ರೆಕಾರ್ಡ್ ಇಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಹೊಸ ಬಾಂಬ್ ಸಿಡಿಸಿದ್ದಾರೆ.
ಮುಡಾ ಹಗರಣ (MUDA Scam) ವಿಚಾರದ ಬಗ್ಗೆ ಮಾತನಾಡುವ ವೇಳೆ, ಇನ್ನೊಂದು ವಿಷಯ ನನಗೆ ರಾತ್ರಿ ಗೊತ್ತಾಗಿದೆ. ಸನ್ಮಾನ್ಯ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಗ್ರೇಟ್ ಅಪವಾದ ಬಂದಿದೆ. ನನ್ನ ಕಡೆ ರೆಕಾರ್ಡ್ ಇಲ್ಲ. ಅವರಿಗೆ ಎಲ್ಲೋ ಒಂದು ಲ್ಯಾಂಡ್ ಅಲಾಟ್ ಆಗಿದೆಯಂತೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ಎಕರೆ ಅಲಾಟ್ ಆಗಿದೆಯಂತೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಇದು ಒಂದೇ ಹಗರಣನಾ? ಇನ್ನು ಎಷ್ಟು ಇದಾವೆ ಬಿಚ್ಚಲಾ? ಇನ್ನೂ ಇವೆ, ಸಂದರ್ಭ ಬರ್ಲಿ ಹೇಳ್ತೀನಿ. ಸಿದ್ದರಾಮಣ್ಣಂದು ನನಗೆ ಗೊತ್ತಿಲ್ಲ. ಸಚಿವ ಮಹದೇವಪ್ಪ ಹೇಳಿಕೆ ನೋಡಿದ್ದೇನೆ. ಅದು ಬೇರೆ ಲ್ಯಾಂಡ್ ಇದೆ ಅಂತಾ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಕೇಂದ್ರ ಸಚಿವ ಸ್ಥಾನ ವಿಚಾರವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ನನಗೆ ಮಂತ್ರಿ ಕೊಡುವ ಅವಶ್ಯಕತೆ ಇಲ್ಲ. ನನಗೆ ಅವಶ್ಯಕತೆ ಇರೋದು ಜನರದ್ದು. ಆದರೆ ಜನರು ನಾನು ಮರಳಿ ಬಂದ ಮೇಲೆ ಥೂ ಥೂ ಅಂತಾ ಉಗುಳಿದರು. ನಾವು ಮೊದಲೆ ಹೇಳಿದ್ದೆವು. ನಿಮಗೆ ದಲಿತರಿಗೆ ಈ ಬಿಜೆಪಿ ಪಕ್ಷ ವಿರೋಧಿ ಇದೆ ಅಂತಾ. ನನಗೋಸ್ಕರ ಅಲ್ಲ ಜನರ ಒತ್ತಡಕ್ಕಾಗಿ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾ
ಇದು ಎಂತಹ ಅನ್ಯಾಯ ಒಬ್ಬ ದಲಿತ ಮನುಷ್ಯನಿಗೆ. ದಕ್ಷಿಣ ಭಾರತದಲ್ಲಿ ನಾನೊಬ್ಬನೆ ದಲಿತ ಗೆದ್ದು ಬಂದಿದ್ದೇನೆ. ಏಳು ಚುನಾವಣೆಯಲ್ಲಿ ಆಯ್ಕೆ ಆಗಿ ಬಂದಿದ್ದೇನೆ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಸಪೋರ್ಟ್ ಮಾಡಿಲ್ವಾ? ನನಗೆ ತುಂಬಾ ಅದರ ಬಗ್ಗೆ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.