ಪಾಟ್ನಾ: ರಾಷ್ಟ್ರೀಯ ಜನತಾ ದಳದ (RJD) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಸಿಂಗಾಪುರದಲ್ಲಿ (Singapore) ಯಶಸ್ವಿ ಮೂತ್ರಪಿಂಡ ಕಸಿ (Kidney Transplant) ಶಸ್ತ್ರಚಿಕಿತ್ಸೆ (Surgery) ಒಳಗಾಗಿದ್ದಾರೆ. ಸಿಂಗಾಪುರದಲ್ಲಿ ನೆಲೆಸಿರುವ ತಮ್ಮ ಪುತ್ರಿಯೇ (Daughter) ಲಾಲು ಅವರಿಗೆ ಕಿಡ್ನಿ ದಾನ ಮಾಡಿ ತಂದೆಗೆ ಹೊಸ ಬದುಕು ನೀಡಿದ್ದಾರೆ.
ಈ ಬಗ್ಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಟ್ವೀಟ್ ಮಾಡಿ, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಹಾಗೂ ಅವರನ್ನು ಇದೀಗ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
पापा का किडनी ट्रांसप्लांट ऑपरेशन सफलतापूर्वक होने के बाद उन्हें ऑपरेशन थियेटर से आईसीयू में शिफ्ट किया गया।
डोनर बड़ी बहन रोहिणी आचार्य और राष्ट्रीय अध्यक्ष जी दोनों स्वस्थ है। आपकी प्रार्थनाओं और दुआओं के लिए साधुवाद। ???????? pic.twitter.com/JR4f3XRCn2
— Tejashwi Yadav (@yadavtejashwi) December 5, 2022
Advertisement
ಲಾಲು ಯಾದವ್ ಅವರು ಕಳೆದ ಹಲವು ತಿಂಗಳುಗಳಿಂದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಬಳಿಕ ಲಾಲು ಅವರ ಪುತ್ರಿ ಸಿಂಗಾಪುರ ಮೂಲದ ರೋಹಿಣಿ ಆಚಾರ್ಯ ತಂದೆಗೆ ಕಿಡ್ನಿ ದಾನ ಮಾಡಲು ಮುಂದಾದರು. ಇದನ್ನೂ ಓದಿ: ಮದುವೆಯಲ್ಲಿ ಮೇಳೈಸಿದ ಡಿಜಿಟಲ್ ಇಂಡಿಯಾ
Advertisement
Advertisement
ಲಾಲು ಅವರು ಮೇವು ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗಿದ್ದು, ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ದೆಹಲಿ ಹಾಗೂ ರಾಂಚಿಯಲ್ಲಿ ಹಲವು ಬಾರಿ ಆಸ್ಪತ್ರೆ ಸೇರಿದ್ದರು. ಅವರು ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
माँ- पिता मेरे लिए भगवान हैं. मैं उनके लिए कुछ भी कर सकती हूँ. आप सबों के शुभकामनाओं ने मुझे और मजबूत बनाया है.
मैं आप सबके प्रति दिल से आभार प्रकट करती हूँ. आप सब का विशेष प्यार और सम्मान मिल रहा है.
मैं भावुक हो गयी हूँ. आप सबको दिल से आभार कहना चाहती हूँ. pic.twitter.com/ipvrXrFitS
— Rohini Acharya (@RohiniAcharya2) November 11, 2022
ಕೆಲ ದಿನಗಳ ಹಿಂದೆ ರೋಹಿಣಿ ಅವರು ತಮ್ಮ ತಂದೆಗೆ ಕಿಡ್ನಿ ದಾನ ಮಾಡುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದರು. ನಾನು ನನ್ನ ತಂದೆಗೆ ನನ್ನ ದೇಹದ ಒಂದು ಸಣ್ಣ ಮಾಂಸವನ್ನು ನೀಡುತ್ತಿದ್ದೇನೆ. ನಾನು ಅಪ್ಪನಿಗಾಗಿ ಏನು ಬೇಕಾದರೂ ಮಾಡಬಲ್ಲೆ. ಎಲ್ಲವೂ ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅಪ್ಪ ಮತ್ತೊಮ್ಮೆ ಆರೊಗ್ಯವಾಗಿ ಧ್ವನಿ ಎತ್ತುತ್ತಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ