LatestMain PostNational

ಭಯ ಬೇಡ, ಲಾಲೂ ಪ್ರಸಾದ್ ಚೇತರಿಸಿಕೊಳ್ಳುತ್ತಿದ್ದಾರೆ: ಪುತ್ರಿ ಮಿಸಾ ಭಾರ್ತಿ

Advertisements

ನವದೆಹಲಿ: ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸುಧಾರಿಸುತ್ತಿದೆ. ಶೀಘ್ರದಲ್ಲೇ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಪುತ್ರಿ ಮಿಸಾ ಭಾರ್ತಿ ಮಾಹಿತಿ ನೀಡಿದ್ದಾರೆ.

ಮಿಸಾ ಭಾರ್ತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಾಲೂ ಪ್ರಸಾದ್ ಅವರ ಚೇತರಿಕೆಯ ಸುದ್ದಿಯನ್ನು ತಿಳಿಸಿದ್ದು, ಆಸ್ಪತ್ರೆಯಲ್ಲಿರುವ ಲಾಲೂ ಅವರ ಕೆಲವು ಭಾವನಾತ್ಮಕ ಫೊಟೋಗಳನ್ನೂ ಹಂಚಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರಾರ್ಥನೆಯಿಂದ ಹಾಗೂ ದೆಹಲಿಯ ಏಮ್ಸ್ ಆಸ್ಪತ್ರೆಯ ಉತ್ತಮ ವೈದ್ಯಕೀಯ ಆರೈಕೆಯಿಂದ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಈಗ ಅವರು ಹಾಸಿಗೆಯಿಂದ ಎದ್ದು ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ. ಇತರರ ಸಹಾಯದಿಂದ ಎದ್ದು ನಿಲ್ಲಲು ಅವರು ಸಮರ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಬೆಯೊಂದಿಗಿನ ಹಳೆ ಕ್ಷಣ ನೆನೆದ ಮೋದಿ – ಜುಲೈ 9ರಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ

ಪ್ರತಿಯೊಂದು ಸಮಸ್ಯೆಯ ವಿರುದ್ಧ ಹೋರಾಡುವ ಕಲೆ ಲಾಲೂ ಪ್ರಸಾದ್ ಯಾದವ್ ಅವರಿಗಿಂತ ಚೆನ್ನಾಗಿ ಯಾರಿಗೆ ತಿಳಿದಿದೆ? ನಿಮ್ಮೆಲ್ಲರ ಸ್ಥೈರ್ಯ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ಲಾಲೂ ಅವರ ಸ್ಥಿತಿ ಈಗ ಉತ್ತಮವಾಗಿದೆ. ದಯವಿಟ್ಟು ವದಂತಿಗಳಿಗೆ ಗಮನ ಕೊಡಬೇಡಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಲಾಲೂ ಅವರನ್ನು ನೆನೆಸಿಕೊಳ್ಳಿ ಎಂದು ಹೇಳಿದ್ದಾರೆ.

ಲಾಲೂ ಯಾದವ್ ಅವರ ಆರೋಗ್ಯದ ಬಗ್ಗೆ ತಿಳಿಸಿದ ಏಮ್ಸ್‌ನ ವೈದ್ಯರು, ಲಾಲೂ ಯಾದವ್ ಅವರ ಭುಜ ಹಾಗೂ ತೊಡೆಯಲ್ಲಿ ಸಣ್ಣ ಮೂಳೆ ಮುರಿತವಾಗಿದೆ. ಆದ್ದರಿಂದ ಅವರಿಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಭಿಕ್ಷೆ ಬೇಡಿದ್ದ ಹಣ ಎಲ್ಲಿ ಹೋಯ್ತು?- ಬೊಮ್ಮಾಯಿ ತಿರುಗೇಟು

ವಾಸ್ತವವಾಗಿ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಲಾಲೂ ಯಾದವ್ ಜುಲೈ 3 ರಂದು ತಮ್ಮ ನಿವಾಸದ ಮೆಟ್ಟಿಲುಗಳಿಂದ ಜಾರಿ ಬಿದ್ದಿದ್ದರು. ಇದರಿಂದ ಅವರ ಭುಜ ಹಾಗೂ ತೊಡೆಗಳಲ್ಲಿ ಮೂಳೆ ಮುರಿತವಾಗಿತ್ತು. ಮೊದಲಿಗೆ ಅವರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಉತ್ತಮ ಚಿಕಿತ್ಸೆಗಾಗಿ ಅವರನ್ನು ಬುಧವಾರ ಏರ್ ಆಂಬುಲೆನ್ಸ್ ಮುಖಾಂತರ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಸ್ಥಿತಿ ಗಣನೀಯವಾಗಿ ಚೇತರಿಕೆ ಕಂಡಿದೆ.

Live Tv

Leave a Reply

Your email address will not be published.

Back to top button