BollywoodCinemaKarnatakaLatestMain Post

ಲಾಲ್ ಸಿಂಗ್ ಚಡ್ಡಾ ಎಫೆಕ್ಟ್ : ಆಮೀರ್ ಖಾನ್ ಸಿನಿಮಾಗಳಿಂದ ದೂರ ಸರಿಯುತ್ತಿರುವ ನಿರ್ಮಾಪಕರು

ಬಾಲಿವುಡ್ ಸಿನಿಮಾ ರಂಗದಲ್ಲಿ ಬಾಯ್ಕಾಟ್ ವಿಚಾರ ಬಿಟೌನ್ ಸ್ಟಾರ್ ನಟರನ್ನು ನಿದ್ದೆಗೆಡಿಸುತ್ತಿದೆ. ಅಮಿತಾಭ್ ಬಚ್ಚನ್ ಅಂತಹ ದಿಗ್ಗಜ ನಟರೇ ಈ ವಿಚಾರದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಮೊನ್ನೆಯಷ್ಟೇ ಇಂತಹ ವಿಷಯಗಳಲ್ಲಿ ಏನು ಮಾತಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಬಾಯ್ಕಾಟ್ ಬಾಲಿವುಡ್ ಮಂದಿಯನ್ನು ಕಾಡುತ್ತಿದೆ.

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್, ತಾಪ್ಸಿ ಪನ್ನು ನಟನೆಯ ಸಿನಿಮಾ, ಇದೀಗ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರಕ್ಕೂ ಬಾಯ್ಕಾಟ್ ಭೂತ ಕಾಡಿದೆ. ಅದರಲ್ಲೂ ಹೆಚ್ಚು ತೊಂದರೆ ಮಾಡಿದ್ದ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಎನ್ನುವುದು ಬಾಲಿವುಡ್ ಲೆಕ್ಕಾಚಾರ. ಬಾಕ್ಸ್ ಆಫೀಸಿನಲ್ಲಿ ಸೋಲು ಮಾತ್ರವಲ್ಲ, ಅವರ ಮುಂದಿನ ಚಿತ್ರಗಳಿಗೆ ತೊಂದರೆ ಎದುರಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

ಆಮೀರ್ ಖಾನ್ ಅವರು ಈಗಾಗಲೇ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಬಾಯ್ಕಾಟ್ ಗೆ ಭಯಪಟ್ಟುಕೊಂಡಿರುವ ನಿರ್ಮಾಪಕರು ಒಬ್ಬೊಬ್ಬರೇ ಒಪ್ಪಿಕೊಂಡ ಸಿನಿಮಾಗಳಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಆಮೀರ್ ಹೊಸ ಸಿನಿಮಾ ಘೋಷಣೆ ಆಗಬೇಕಿತ್ತು. ಆದರೆ, ಬಾಯ್ಕಾಟ್ ನಿಂದಾಗಿ ಮುಂದೂಡಲಾಗಿದೆ ಎನ್ನುವು ನಯಾ ಸಮಾಚಾರ.

Live Tv

Leave a Reply

Your email address will not be published.

Back to top button