ಬಿಗ್ ಬಾಸ್ ಮನೆಯಲ್ಲಿ ಯಾರು ಹೇಗೆ ಎನ್ನುವುದು ನೋಡುಗರಿಗಿಂತ ಮನೆಯಲ್ಲಿ ಇರುವವರಿಗೆ ಹೆಚ್ಚು ಗೊತ್ತಿರುತ್ತದೆ. ಹಾಗಾಗಿ ಮನೆಯಿಂದ ಆಚೆ ಬರುವ ಸ್ಪರ್ಧಿಗಳು ಶಾಕಿಂಗ್ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ನೋಡುಗರಿಗೆ ಅವರು ತೋರುವುದು ಒಂದು, ಮನೆಯಲ್ಲಿ ಅವರು ಇರುವುದು ಒಂದು ಎನ್ನುವಂತಹ ಮಾತುಗಳನ್ನು ಅವರು ಆಡುತ್ತಿದ್ದಾರೆ. ಹಾಗಾಗಿ ಮನೆಯಲ್ಲಿ ಇರುವವರ ಬಣ್ಣ, ಆಚೆ ಬಂದವರಿಂದ ಬಯಲಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೂ ಚೆನ್ನಾಗಿಯೇ ಇರುವ, ಒಂದು ಸಲವೂ ನಾಮಿನೇಟ್ ಆಗದೇ ಇರುವಂತಹ ಸ್ಪರ್ಧಿ ಎಂದರೆ ಚೈತ್ರಾ ಹಳ್ಳಿಕೇರಿ. ಖಾಸಗಿ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಿರುವ ಮತ್ತು ಅದನ್ನು ಬಹಿರಂಗವಾಗಿ ಹೇಳಿಕೊಂಡು ಗಟ್ಟಿಗಿತ್ತಿ ಅನಿಸಿರುವ ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದರಂತೆ. ಹಾಗಂತ ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?
Advertisement
Advertisement
ಚೈತ್ರಾ ಬಿಗ್ ಬಾಸ್ ಮನೆ ಒಳಗೆ ಇರುವವರ ಜೊತೆ ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿ ಮಾತನಾಡುತ್ತಿದ್ದರು. ನಾನು ಮನೆಯಿಂದ ಆಚೆ ಬರುವ ಎರಡು ದಿನ ಮುಂಚೆ ನನ್ನ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಎಷ್ಟು ದಿನ ಅಂತ ಮುಖವಾಡ ಹಾಕಿಕೊಂಡು ಇರುವುದಕ್ಕೆ ಆಗತ್ತೆ? ಈಗೀಗ ಅವರು ಮುಖವಾಡ ತಗೆದು ಬದುಕುತ್ತಿದ್ದಾರೆ ಎಂದು ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ.