ಅಂದ ಚೆಂದ ಫಿಟ್ನೆಸ್ ಎಲ್ಲವೂ ಇದ್ರೂ ಸಮಂತಾಗೆ (Samantha) ಇತ್ತೀಚೆಗೆ ಸಿನಿಮಾ ಆಫರ್ ಕಡಿಮೆಯಾಗಿದೆ. ವೆಬ್‍ಸಿರೀಸ್‍ಗಳು ಬಿಟ್ರೆ ಸಮಂತಾಗೆಂದೇ ಹುಡುಕಿಕೊಂಡು ಬರುವ ಅವಕಾಶಗಳು ಕಮ್ಮಿಯಾಗಿರೋದು ಎಲ್ಲರ ಗಮನಕ್ಕೂ ಬಂದಿದೆ. ಅವಕಾಶಗಳು ಬರುತ್ತಿಲ್ಲವೋ ಅಥವಾ ಸಮಂತಾ ಬೇಡ ಎನ್ನುತ್ತಿದ್ದಾರೋ ಅನ್ನೋ ಅನುಮಾನ ಎಲ್ಲರಲ್ಲಿತ್ತು. ಈಗ ನಟಿಯೊಬ್ಬರು ಸಮಂತಾ ಹೆಸರು ಹೇಳದೇ ಆಡಿದ ಮಾತು ಟಾಲಿವುಡ್ (Tollywood) ಇಂಡಸ್ಟ್ರಿಯನ್ನು ಶೇಕ್ ಮಾಡಿದೆ.
ಸಮಂತಾಳ ಸಿನಿಮಾ ಅವಕಾಶವನ್ನು ನಾಗಾರ್ಜುನ (Nagarjuna) ಕುಟುಂಬ ತಪ್ಪಿಸುತ್ತಿದೆಯಂತೆ. ಸ್ಟಾರ್ ನಟಿಯಾಗಿದ್ದಾಗ ನಾಗಚೈತನ್ಯ ಕೈ ಹಿಡಿದ ಸಮಂತಾ, ಸಂಸಾರದಲ್ಲಿ ಬಿರುಕುಂಟಾಗಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ನಾಗಚೈತನ್ಯ ಇನ್ನೊಂದು ಮದುವೆಯನ್ನೂ ಆಗಿದ್ದಾರೆ. ಆದರೆ ಸಮಂತಾಗೆ ಬರುವ ಸಿನಿಮಾ ಆಫರ್‌ಗಳನ್ನ ಟಾಲಿವುಡ್ ಪ್ರತಿಷ್ಠಿತ ಸಿನಿಮಾ ಕುಟುಂಬ ಸಮಂತಾ ಮಾಜಿ ಮಾವ ನಾಗಾರ್ಜುನ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಟಿ ಲಕ್ಷ್ಮೀ ಮಂಚು (Lakshmi Manchu) ಅವರು ಕುಟುಂಬದ ಹೆಸರು ಹಾಗೂ ನಟಿಯ ಹೆಸರು ಹೇಳದೆಯೇ ಈ ವಿಚಾರವನ್ನ ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಿಂಟಿಂಗ್ ಮಷಿನ್ ಕಾಸ್ಟ್ಯೂಮ್ ಧರಿಸಿ ಬಂದ ಉರ್ಫಿ – ನನಗೊಂದು ಪ್ರಿಂಟ್ ಕೊಡಿ ಅಂದ್ರು ನೆಟ್ಟಿಗರು
ಸಂದರ್ಶನವೊಂದರಲ್ಲಿ ಹಿರಿಯ ನಟ ಮೋಹನ್ ಬಾಬು ಪುತ್ರಿ ನಟಿ ಲಕ್ಷ್ಮಿ ಮಂಚು ಮಹತ್ವದ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಮಹಿಳೆಯರ ಮೇಲಿನ ಅನ್ಯಾಯದ ವರ್ತನೆಯ ಬಗ್ಗೆ ಮಾತನಾಡುತ್ತಾ ಯಾರ ಹೆಸರನ್ನೂ ಬಳಸದೆ ಸಮಂತಾಗೆ ಅನ್ಯಾಯವಾಗುತ್ತಿರುವ ವಿಚಾರವನ್ನ ಪ್ರಸ್ತಾಪಿಸಿದ್ರು. “ಓರ್ವ ನಟಿ ಸಿನಿಮಾದಲ್ಲಿ ಕೆಲಸ ಮಾಡಲು ಸಿದ್ಧರಿಸಿದ್ದಾರೆ. ಆದರೆ ನಿರ್ಮಾಪಕರು ಅವರಿಗೆ ಆಫರ್ ಕೊಡಲು ಹೆದರುತ್ತಿದ್ದಾರೆ. ಇಲ್ಲೇ ಕೆಲಸ ಮಾಡುವ ಒಬ್ಬ ಸೂಪರ್‍ಸ್ಟಾರ್‍ನ ಮಾಜಿ ಪತ್ನಿ ಇದ್ದಾರೆ. ಅವರು ವಿಚ್ಛೇದನ ಪಡೆದುಕೊಂಡ ಬಳಿಕ ಅವರಿಗೆ ಒದಗಿ ಬಂದ ಆಫರ್‌ಗಳನ್ನೆಲ್ಲಾ ಕಿತ್ತುಕೊಳ್ಳಲಾಗುತ್ತಿದೆ. ಬೇಡಮ್ಮ ಅವರು ಏನಂತಾರೋ ಏನೋ ಎಂದು ಆಕೆಗೆ ಹೇಳಲಾಗುತ್ತದೆ. ಆಕೆ ಒಳ್ಳೆಯ ಕೆಲಸ ಮಾಡಲು ಕಾಯುತ್ತಿದ್ದಾಳೆ. ನಾನು ಆಕೆಯ ಹೆಸರನ್ನು ಹೇಳುವ ಅಗತ್ಯ ಇಲ್ಲ” ಎಂದಿದ್ದಾರೆ.
ಇದೀಗ ಲಕ್ಷ್ಮಿ ಮಂಚು ಮಾತು ಟಾಲಿವುಡ್‍ನಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಸಮಂತಾಗೆ ಸಿನಿಮಾ ಆಫರ್‍ಗಳು ಬರುತ್ತಿಲ್ಲವಾ ಎಂದು ಬೇಸರ ಹೊರಹಾಕಿದ್ದಾರೆ ಸಮಂತಾ ಫ್ಯಾನ್ಸ್. ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು