ಬೆಳಗಾವಿ: ಮಹಾಪುರುಷರ ಪ್ರತಿಮೆಗೆ ಕಪ್ಪುಮಸಿ, ಪ್ರತಿಮೆ ಕೆಡವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಬೇಳೆ ಬೇಯಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಸುವರ್ಣಸೌಧದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜ, ರಾಜ್ಯದ ಮಧ್ಯೆ ಹೀಗೆ ಮಾಡಿ ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಯಾರು ತಪ್ಪಿತಸ್ಥರು ಇದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಎಂಇಎಸ್ ನಿಷೇಧ ಬಗ್ಗೆ ಚರ್ಚೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವರು ಸಮಾಜದ ಹೆಸರು ಕೆಡಿಸುತ್ತಿದ್ದಾರೆ. ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು. ಕುರುಬ ಮತ್ತು ಮರಾಠ ಸಮುದಾಯದ ನಾಯಕರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್
Advertisement
Advertisement
ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು. ಕೆಲವರು ಈ ರೀತಿಯ ವರ್ತನೆ ಮಾಡುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆ ಬಗ್ಗೆ ಬೆಳಗಾವಿ ಮುಖಂಡರ ಮೌನ ವಿಚಾರವಾಗಿ ಮಾತನಾಡಿ, ಯಾರನ್ನೂ ಓಲೈಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾರೂ ತಪ್ಪು ಮಾಡುತ್ತಾರೆ, ಆಗ ಅವರು ತಪ್ಪು ಮಾಡಿದ್ದಾರೆ ಎಂದು ಹೇಳುವ ಧೈರ್ಯ ನನಗೆ ಇದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು