ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ವಿಳಂಬಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮೊಂಡು ವಾದ ಮಂಡಿಸಿದ್ದಾರೆ.
ಗೃಹಲಕ್ಷ್ಮಿ ಹಣ 2 ತಿಂಗಳು ಯಾಕೆ ಬರಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮ್ಮ ಸಂಸ್ಥೆಗಳಲ್ಲಿ ನಿಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
Advertisement
Advertisement
ಈ ಪ್ರಶ್ನೆಗೆ ಮಾಧ್ಯಮಗಳು ಹೌದು ಮೇಡಂ ಸರಿಯಾಗಿ ಸಂಬಳ ಬರುತ್ತಿದೆ ಎಂದು ಉತ್ತರಿಸಿದ್ದಕ್ಕೆ ಸರ್ಕಾರಿ ಸಂಸ್ಥೆಗಳಲ್ಲಿ ಹಾಗಿಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ 1 ತಿಂಗಳಿಗೊಮ್ಮೆ, 2 ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ ಕೊಡುತ್ತಾರೆ. ಹಿಂದಿನಿಂದಲೂ ಹೀಗೆಯೇ ಇದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್ ಬಳಸಿ ಸುಲಿಗೆ – ಸೀತಾರಾಮನ್, ಬಿಜೆಪಿ ನಾಯಕರ ಮೇಲಿದ್ದ ಕೇಸ್ ರದ್ದು
Advertisement
ಗೃಹಲಕ್ಷ್ಮಿ ಯೋಜನೆಯ ಹಣ 1 ತಿಂಗಳು ತಡವಾದರೆ 500 ಫೋನ್ ಕರೆಗಳು ಬರುತ್ತವೆ. ಅವರನ್ನು ಸಮಾಧಾನ ಮಾಡುವುದರಲ್ಲೇ ಸಮಯ ಹಿಡಿಯುತ್ತದೆ. ತಿಂಗಳು ಬಂದಿಲ್ಲ ಎಂದರೆ ಮುಂದಿನ ತಿಂಗಳು ಬರಲ್ಲ ಅಂತ ವಿಪಕ್ಷಗಳು ಹೇಳುತ್ತವೆ. ನಾವು ವಚನಭ್ರಷ್ಟರು ಅಲ್ಲ. ವಚನ ಪಾಲನೆ ಮಾಡುತ್ತೇವೆ ಎಂದು ಹೇಳುವ ಮೂಲಕ ಹಣ ವಿಳಂಬವಾಗಿ ಪಾವತಿಯಾಗುವುದಕ್ಕೆ ಸಮರ್ಥನೆ ನೀಡಿದ್ದಾರೆ.
Advertisement