– ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು
– ಕರ್ನಾಟಕದಲ್ಲಿಯೂ ರಾಮಜ್ಯೋತಿ ಬೆಳಗಿಸಿದ ಭಕ್ತರು
ಅಯೋಧ್ಯೆ: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪಟ್ಟಾಭಿಷೇಕ ನೆರವೇರಿದೆ. ಆರಾಧ್ಯ ದೈವ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನನ್ನ ಕಣ್ತುಂಬಿಕೊಂಡು ಕೋಟ್ಯಂತರ ಭಕ್ತರು ಧನ್ಯರಾಗಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
- Advertisement -
ರಾಮಮಂದಿರ ಉದ್ಘಾಟನೆ ವಿಜಯದ ಇಡೀ ದೇಶಾದ್ಯಂತ ನೆಲೆಸಿರುವ ರಾಮಭಕ್ತರು, ಪ್ರತಿ ಮನೆ-ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಖ್ಯಾತ ನಟ-ನಟಿಯರು ರಾಮ ಜ್ಯೋತಿ (Ram Jyoti) ಬೆಳಗಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ದೀಪ ಬೆಳಗಿಸುವ ಮೂಲಕ ದೇಶದ ಜನರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್
- Advertisement -
#WATCH | Laser and light show depicting Lord Ram at the Ayodhya Ram Temple after ‘Pran Pratishtha’ of Ram Lalla. pic.twitter.com/01sy4mM8uH
— ANI (@ANI) January 22, 2024
- Advertisement -
ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು:
ಅಯೋಧ್ಯೆಯ ಸರಯೂ ನದಿ ತೀರದ ರಾಮ್ ಕಿ ಪಾಡಿಯಲ್ಲಿ ಸರಿಸುಮಾರು 10 ಲಕ್ಷ ದೀಪ ಬೆಳಗುತ್ತಿದ್ದು, ಇದರ ನಡುವೆ ಲೇಸರ್ ಲೈಟ್ ಶೋಗಳೂ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ. ಇದರೊಂದಿಗೆ ಕರ್ನಾಟಕದಲ್ಲಿಯೂ ಶ್ರೀರಾಮನ ಭಕ್ತರು ತಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ದೀಪೋತ್ಸವ ನೆರವೇರಿಸಿದ್ದಾರೆ.
- Advertisement -
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಪ್ರತಿ ಮನೆ ಮನೆಗಳಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಕರೆ ನೀಡಿದ್ದರು. ಹೊಸ ಯುಗದ ಆಗಮನದ ಸಂಕೇತವಾಗಿ ಸಂಜೆ ನಿಮ್ಮ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸಿ ಶ್ರೀರಾಮನಲ್ಲಿ ಪ್ರಾರ್ಥಿಸಿ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
ಅಯೋಧ್ಯೆ ತುಂಬ ರಾಮ ನಾಮ ಸ್ಮರಣೆ: ದೇಶದೆಲ್ಲೆಡೆ ರಾಮಾಲಯ (ರಾಮಮಂದಿರ) ಆರಂಭೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ. ಅಯೋಧ್ಯೆಯ ತುಂಬಾ ರಾಮ ನಾಮ ಸ್ಮರಣೆ ಮಾರ್ದನಿಸಿದೆ. ಎಲ್ಲಿ ನೋಡಿದರೂ ರಾಮಧ್ವಜ, ರಾಮಜ್ಯೋತಿ, ಕೇಸರಿ ಶಾಲು ಧರಿಸಿದ ಭಕ್ತಗಣವೇ ಕಾಣುತ್ತಿದೆ. ರಾಮಭಜನೆ, ಭಗವದ್ಗೀತೆ ಪಠಣ, ಪೂಜೆ ಪುನಸ್ಕಾರಗಳು ದೇಶದ ಮೂಲೆಮೂಲೆಯಲ್ಲಿ ನಡೆದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಮೆರಿಕ, ಪ್ಯಾರಿಸ್, ಮೆಕ್ಸಿಕೋ ಹಾಗೂ ರಷ್ಯಾ ದೇಶಗಳಲ್ಲಿಯೂ ಭಾರತೀಯ ಮೂಲದ ರಾಮಭಕ್ತರು ಈ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.