ಗದಗ: ಲಕ್ಕುಂಡಿಯಲ್ಲಿ (Lakkundi Excavation) ಐದನೇ ದಿನದ ಉತ್ಖನನ ಕಾರ್ಯ ಮುಗಿದಿದ್ದು 2ನೇ ದಿನ ಗೋಚರವಾಗಿದ್ದ ಶಿವಲಿಂಗದ ಪಾಣಿಪೀಠವನ್ನು (Shivalinga Panipeeta) ಪುರಾತತ್ವ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಈ ಪಾಣಿಪೀಠ ಎರಡೂ ಭಾಗವಾಗಿ ಒಡೆದು ಹೋಗಿದೆ. ಶಿವಲಿಂಗ ಇರುವ ಮಧ್ಯದ ಭಾಗ ತುಂಡಾಗಿದ್ದು ಈಗ ಈ ಭಾಗದ ಶೋಧ ಕಾರ್ಯ ನಡೆಯುತ್ತಿದೆ. ಕೈಮುಗಿದು, ಪದ್ಮಾಸನದಲ್ಲಿ ಕುಳಿತ ಶಿಲಾಕೃತಿಯನ್ನು ಪಾಣಿಪೀಠದ ಬಲ ಭಾಗದಲ್ಲಿ ಕೆತ್ತಲಾಗಿದೆ. ಇದನ್ನೂ ಓದಿ: ಲಕ್ಕುಂಡಿ ನಿಧಿ ಸಿಕ್ಕ ಗ್ರಾಮದಲ್ಲಿ ಮನೆಯೊಳಗೆ ದೇವಸ್ಥಾನ
ಇಂದು ಮುಂಜಾನೆ ಪುರಾತನ ಕಾಲದ ಮಡಿಕೆ ಹಾಗೂ ಕವಡೆ ಪತ್ತೆಯಾಗಿತ್ತು. ಈಗ ಪುರಾತತ್ವ ಇಲಾಖೆ ಸಿಬ್ಬಂದಿ ಫೋಟೋಗ್ರಾಫಿ ಹಾಗೂ ಅದರ ಕುರುಹುಗಳ ದಾಖಲು ಮಾಡಿದ್ದಾರೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸಿದ್ಧರ ಬಾವಿ ನಡುವೆ ನಡೆದಿರುವ ಉತ್ಖನನದ ವೇಳೆ ಈ ಪ್ರಾಚ್ಯಾವಶೇಷ ಸಿಕ್ಕಿದೆ. ಈ ಜಾಗದಲ್ಲಿ ದೇವಸ್ಥಾನದಿಂದ ಬಾವಿವರೆಗೆ ಮೆಟ್ಟಿಲುಗಳಿರುವ ಸಾಧ್ಯತೆ ಇದೆ. ಆರೇಳು ಅಡಿ ಕೆಳಕ್ಕೆ ಇಳಿದರೆ ಇನ್ನೂ ಹಲವಾರು ಪ್ರಾಚ್ಯಾವಶೇಷಗಳು ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ನಿಧಿ ಸಿಕ್ಕರೆ ಗ್ರಾಮವೇ ಸ್ಥಳಾಂತರ


