ಹೈದರಾಬಾದ್: ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ.
Advertisement
Advertisement
ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು ಬಂದಿದ್ದರು. ಮದುವೆ ನಂತರ ಆ ಹಣವನ್ನು ನವಜೋಡಿ ಮೇಲೆ ಸುರಿಸಿದ್ದಾರೆ.
Advertisement
ವೇದಿಕೆ ಮೇಲೆಯೇ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ಹಣವನ್ನು ಅವರ ಮೇಲೆ ಸುರಿದಿದ್ದಾರೆ. ಅವರು ಹಣವನ್ನು ಸುರಿಯುತ್ತಿದ್ದಂತೆ ಅಲ್ಲಿದ್ದ ಮಕ್ಕಳು ಹಾಗೂ ಸಂಬಂಧಿಕರು ಹಣದ ನೋಟುಗಳನ್ನು ತೆಗೆದುಕೊಳ್ಳಲು ವೇದಿಕೆ ಹತ್ತಿದ್ದಾರೆ.
Advertisement
ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಸಾಕಷ್ಟು ಜನ ಚರ್ಚೆ ಮಾಡುತ್ತಿದ್ದಾರೆ.
Currency notes amounting to Lakhs of rupees showered on bride and groom in Telangana… Any one can reach this video to Income Tax ? @BJP4Telangana @BJP4India https://t.co/VT0naByFZt
— सुज्ञान् बेट्टदपुर (Sugnyan Bettadapura) (@sugnyan) March 20, 2019