ಬೆಂಗಳೂರು/ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ಪೋರ್ಟ್ (Bengaluru Airport) ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಿದೇಶಿ ಮಹಿಳೆ ಬಳಿ ಇದ್ದ ಕಂತೆ ಕಂತೆ ದೇಶಿ ಹಣವನ್ನ ವಶಪಡಿಸಿಕೊಂಡಿದ್ದಾರೆ.
Advertisement
ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮೂಲದ ಮಹಿಳೆಯ ಬ್ಯಾಗ್ನಲ್ಲಿ 15 ಲಕ್ಷ ನಗದು ಹಣ ಪತ್ತೆಯಾಗಿದೆ. ಲಗೇಜ್ ಸ್ಕ್ಯಾನಿಂಗ್ ವೇಳೆ ಹಣ ಪತ್ತೆಯಾಗಿದ್ದು ಹಣದ ಸಮೇತ ಮಹಿಳೆಯನ್ನ ವಶಕ್ಕೆ ಪಡೆದಿರುವ ಏರ್ಪೋಟ್ ಭದ್ರತಾ ಸಿಬ್ಬಂದಿ ನಂತರ ಹಣ ಹಾಗೂ ಮಹಿಳೆಯನ್ನ ಆಧಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ ದಿನವೇ CWMA ಸಭೆ – ನೀರು ಹಂಚಿಕೆಯಲ್ಲಿ ಸಿಗಲಿದ್ಯಾ ರಿಲೀಫ್?
Advertisement
Advertisement
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಹಿಳೆಯನ್ನ ಹೆಚ್ಚಿನ ವಿಚಾರಣೆ ಹಣದ ಆಸಲಿಯತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Advertisement
Web Stories