– ಕೊನೆಕ್ಷಣದಲ್ಲಿ ರದ್ದಾದ ಹೆಲಿಕ್ಯಾಪ್ಟರ್ ಪುಷ್ಪವೃಷ್ಠಿ
ರಾಯಚೂರು: ಮಂತ್ರಾಲಯದಲ್ಲಿ (Mantralaya) ಗುರು ರಾಘವೇಂದ್ರ ಸ್ವಾಮಿಗಳ (Guru Raghavendra) 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
Advertisement
ಉತ್ತರಾರಾಧನೆಯ ಮಹಾರಥೋತ್ಸವದ ವೈಭವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಸಾಕ್ಷಿಯಾದರು. ಗುರು ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು.ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?
Advertisement
Advertisement
ಮಹಾರಥೋತ್ಸವ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ( Sri Subudhendra Teertharu ) ಭಕ್ತರನ್ನು ಉದ್ದೇಶಿಸಿ ಆಶೀವಚನ ನೀಡಿದ ಅವರು, ಜಾತಿ, ಮತ, ಬೇಧವಿಲ್ಲದೆ ದೇಶದಲ್ಲಿ ನಡೆಯುವ ಹಬ್ಬ ರಾಯರ ಆರಾಧನಾ ಮಹೋತ್ಸವ. ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ, ಮನುಕುಲಕ್ಕೆ ಒಳ್ಳೆಯದಾಗಲಿ. ಗಲಭೆಗಳು ಆಗದಂತೆ ಭಗವಂತ ಆರ್ಶೀವದಿಸಲಿ ಎಂದು ಪ್ರಾರ್ಥಿಸೋಣ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ ಅದನ್ನು ಖಂಡಿಸೋಣ. ಎಲ್ಲರೂ ಅಣ್ಣ-ತಮ್ಮಂದಿರ ಹಾಗೇ ಬಾಳುವಂತೆ ಆಗಬೇಕು. ದೇಶ-ವಿದೇಶಗಳ ನಡುವೆ ಗಲಭೆಯಾಗದಂತೆ ಭಗವಂತ ಕಾಪಾಡಲಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು.
Advertisement
ಈ ಬಾರಿ ಉತ್ತರಾರಾಧನೆಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣರಾಜ ಚಾಮರಾಜ ಒಡೆಯರ್ ಭಾಗವಹಿಸಿದ್ದರು. ಯದುವೀರ್ ಒಡೆಯರ್‌ಗೆ ಮಠದಿಂದ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿನ್ನದ ಸರ, ನಗದು ಜೊತೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
On the occasion of the 353rd aradhana mahotsava of Sri Gururaghavendra visited Mantralaya to seek the divine blessings of the Guru Sarvabhouma. Received the blessings of His Holiness Sri Subudhendra Teertharu and offered prayers for the welfare and prosperity of all the people. pic.twitter.com/nuxODQ75Zj
— Yaduveer Wadiyar (@yaduveerwadiyar) August 22, 2024
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯದುವೀರ್ ಒಡೆಯರ್ (Yaduveer Wadiyar) ಮೈಸೂರು ದಸರಾದಷ್ಟೇ ವಿಜೃಂಭಣೆಯಿಂದ ರಾಯರ ಆರಾಧನೆ ನಡೆಯುತ್ತಿದೆ. ಪ್ರಾಚೀನ ಕಾಲದಿಂದಲೂ ರಾಯರ ಆರಾಧನೆ ನಡೆಯುತ್ತಿದೆ ಮುಂದೆಯೂ ನಡೆಯುತ್ತದೆ. ಗುರುಗಳು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆಯೋಣ. ನಮ್ಮ ವಂಶದ ಪರವಾಗಿ ಇಂದು ಸನ್ಮಾನ ಸ್ವೀಕಾರ ಮಾಡಿದ್ದೇನೆ. ಮೈಸೂರು ಸಂಸ್ಥಾನದ ಪರವಾಗಿ ಮಂತ್ರಾಲಯ ಮಠಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಲೋಕಾಯುಕ್ತ, ಸಿಬಿಐಗಿಂತ ಜಾಸ್ತಿ ಹಿಂಸೆ ಕೊಡ್ತಿದೆ – ಡಿಕೆಶಿ
ಮಂತ್ರಾಲಯದಲ್ಲಿ ಮಹಾರಥೋತ್ಸವಕ್ಕೆ ಪ್ರತೀವರ್ಷ ನಡೆಯುತ್ತಿದ್ದ ಪುಷ್ಪವೃಷ್ಠಿ ಈ ಬಾರಿ ಕೊನೆಕ್ಷಣದಲ್ಲಿ ರದ್ದಾಯಿತು. ಜಿಲ್ಲಾಡಳಿತದಿಂದ ಅನುಮತಿ ಸಿಗದ ಹಿನ್ನೆಲೆ ಪುಷ್ಪವೃಷ್ಠಿ ನಡೆಯಲಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಪುಷ್ಪ ವೃಷ್ಟಿಗೆ ಅನುಮತಿ ಸಿಗದ ಹಿನ್ನೆಲೆ ಈ ಬಾರಿ ರದ್ದುಮಾಡಲಾಗಿದೆ.