ಯಾದಗಿರಿ: ಜಿಲ್ಲೆಯ ಮೈಲಾಪುರದ ಬೆಟ್ಟದ ಮೇಲೆ ನೆಲಸಿರಯವ ಮಲ್ಲಯ್ಯ ದೇವರನ್ನು ಜಾತ್ರೆಗೂ ಮುನ್ನವೇ ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ.
ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ಮಲ್ಲಯ್ಯ ದೇವರ ಜಾತ್ರೆ ನಡೆಯುತ್ತೆ. ಈ ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಗೆ ಬಂದು ಮಲ್ಲಯ್ಯನ ದರ್ಶನ ಪಡೆಯುತ್ತಾರೆ. ಮಂಗಳವಾರ ಮಲ್ಲಯ್ಯ ದೇವರ ಜಾತ್ರೆ ನಡೆಯಲಿದೆ. ಆದರೆ ಜಾತ್ರೆಗೂ ಮುನ್ನವೇ ಲಕ್ಷಾಂತರ ಭಕ್ತರು ಮೈಲಾಪುರಕ್ಕೆ ಆಗಮಿಸಿ, ದೇವರ ದರ್ಶನ ಮಾಡುತ್ತಿದ್ದಾರೆ.
Advertisement
Advertisement
ದೇವಸ್ಥಾನಕ್ಕೆ ಬರುವ ಭಕ್ತರು ಬೆಟ್ಟದ ಕೆಳಗೆ ಮುಡಿಕೊಟ್ಟು, ಪಕ್ಕ ಕೆರೆಯಲ್ಲಿ ಸ್ನಾನ ಮಾಡಿದರೆ ಮಲ್ಲಯ್ಯ ಭಕ್ತರ ಪಾಪ ಕಳೆಯುತ್ತಾನೆ ಎಂಬ ನಂಬಿಕೆ ಸಹ ಇಲ್ಲಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷವಾಗಿದೆ. ಭಕ್ತರ ಹಿತದೃಷ್ಟಿಯಿಂದ ಈ ಬಾರಿ ಪೊಲೀಸ್ ಇಲಾಖೆಯಿಂದ ಕೆರೆ ಸುತ್ತಲೂ ಮತ್ತು ದೇವಸ್ಥಾನದ ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲದೆ ನೂರಾರು ಪೊಲೀಸರು ದೇವಸ್ಥಾನದಲ್ಲಿ ಗಸ್ತು ಕಾಯುತ್ತಿದ್ದಾರೆ.