ತುಮಕೂರು: ಸುಮಾರು 42 ವರ್ಷಗಳ ಬಳಿಕ ಕೆರೆ(Lake) ತುಂಬಿದಕ್ಕೆ ಹರ್ಷಗೊಂಡ ಜನರು ಕುಣಿದು ಕುಪ್ಪಳಿಸಿದ ಘಟನೆ ಪಾವಗಡ(Pavagada) ಸಮೀಪದ ಆಂಧ್ರದ ಮಡಕಶಿರಾ(Madakasira) ತಾಲೂಕಿನ ಗೌಡನಕುಂಟಾ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಗೌಡನಕುಂಟೆ ಕೆರೆ ಕಳೆದ 42 ವರ್ಷಗಳ ಬಳಿಕ ಈ ವರ್ಷ ತುಂಬಿ ಕೋಡಿ ಬಿದ್ದಿದೆ. ಬರ ಅನುಭವಿಸಿದ್ದ ಜನ ಕೋಡಿ ಬಿದ್ದು ನೀರು ಹರಿಯುವುದನ್ನು ನೋಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು
Advertisement
Gowdankunta near Pavagada at Karnataka – Andhra Pradesh border.
The entire village came out to dance and celebrate, after the village lake overflowed for the first time in 42 years! This is one of the driest places of India.
Yes, people celebrate floods too.
{Video: @sreedharag} pic.twitter.com/9qRXTEqKuV
— Kiran Kumar S (@KiranKS) September 7, 2022
Advertisement
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ರವಿಚಂದ್ರನ್ ಅಭಿನಯದ ʼನಾನು ನನ್ನ ಹೆಂಡ್ತಿʼ ಸಿನಿಮಾದ “ಯಾರೇ ನೀನು ರೋಜಾ ಹೂವೆ ಯಾರೆ ನೀನು ಮಲ್ಲಿಗೆ ಹೂವೆ” ಕನ್ನಡದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ವೃದ್ಧರು ಮಹಿಳೆಯರು ಮಕ್ಕಳು ಯುವಕರು ಹೀಗೆ ಎಲ್ಲಾ ಜನರು ಈ ಒಂದು ಸಂತಸದಲ್ಲಿ ಭಾಗಿಯಾಗಿದ್ದಾರೆ.