ಬೆಂಗಳೂರು: ರಾಜಕಾರಣಿಗಳು ಹಾಗು ಬಿಲ್ಡರ್ ಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನ ಮುಚ್ಚಲು ಹೊರಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಿಲ್ಡರ್ ಗಳಿಗೆ, ಕೈಗಾರಿಗಳಿಗೆ ಮತ್ತು ಅಪಾರ್ಟ್ ಮೆಂಟ್‍ಗಳಿಗೆ ನೋಟಿಸ್ ನೀಡಿತ್ತು. ಕೂಡಲೇ ಕೆರೆಗೆ ಹರಿಸುತ್ತಿರುವ ಮಾಲಿನ್ಯ ನೀರು ನಿಲ್ಲಿಸಿ. ಇಲ್ಲವೇ ಕಾನೂನು ಕ್ರಮಕ್ಕೆ ಮುಂದಾಗಿ ಅಂತ ಪಾಧಿಕಾರ ನೋಟಿಸ್ ನೀಡಿತ್ತು. ಇದೇ ವರದಿಯನ್ನು ಪ್ರಾಧಿಕಾರ ಎನ್‍ಜಿಟಿಗೂ ಸಹ ನೀಡಿತ್ತು. ಎನ್‍ಜಿಟ್ ಬೆಳ್ಳಂದೂರು ಕೆರೆ ಸಂಬಂದಿಸಿದ ವರದಿಗೆ ಪ್ರಶಂಸೆ ವ್ಯಕ್ತಪಡಿಸಿ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ವರದಿ ನೀಡಿ ಅಂತ ಹೇಳಿತ್ತು. ಇದರಿಂದ ಬೆಳ್ಳಂದೂರು ಕೆರೆ ಸಮೀಪವಿದ್ದ ಹಲವು ಕೈಗಾರಿಕೆಗಳು ಮುಚ್ಚುವ ಭೀತಿ ಎದುರಿಸಿದ್ದವು.
Advertisement
Advertisement
ಈ ಹಿನ್ನೆಲೆಯಲ್ಲಿ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಕೆರೆ ಅಭಿವೃದ್ಧ ಪ್ರಾಧಿಕಾರವನ್ನ ಇತ್ತೀಚೆಗೆ ರಚನೆಯಾಗಿರೋ ಟ್ಯಾಂಕ್ ಕನ್ಸರ್ವವೇಷನ್ ಪ್ರಾಧಿಕಾರದ ಜೊತೆ ವಿಲೀನಗೊಳಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದ ಈಗಾಗಲೇ ಅಧಿಕೃತ ಆದೇಶವನ್ನ ಸರ್ಕಾರ ಹೊರಡಿಸಿದೆ. ಈಗಾಗಲೇ ಕೆರೆ ಅಭಿವೃದ್ದಿ ಪ್ರಾಧಿಕಾರಕಕ್ಕೆ ನೀಡಿರೋ ದೂರಗಳನ್ನು ಮತ್ತು ಇತರೆ ಫೈಲ್‍ಗಳನ್ನು ಹಸ್ತಾಂತರಿಸಿ ಅಂತ ಹೇಳಿದ್ದರಿಂದ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಪೈಲ್‍ಗಳನ್ನ ಸಿಬ್ಬಂದಿ ಗಂಟುಮೂಟೆ ಕಟ್ಟಿದ್ದಾರೆ.