ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಕೇವಲ ಮ್ಯೂಸಿಕ್ ಕ್ಷೇತ್ರಕಷ್ಟೇ ಸಿಮಿತವಾಗದೇ ಈಗ ಹೊಸದಾಗಿ ಆಪ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ.
ವಿದೇಶದಲ್ಲಿ ಈಗಾಗಲೇ ಖ್ಯಾತಿ ಪಡೆದು ಹೊಸ ಕ್ರೇಜ್ ಹುಟ್ಟಿಸುತ್ತಿರುವ ಹ್ಯಾಪನ್ ಎಂಬ ಡೇಟಿಂಗ್/ ಮೀಟಿಂಗ್ ಆಪ್ ಜೊತೆ ಲಹರಿ ಸಂಸ್ಥೆ ಸಹ ಕೈ ಜೋಡಿಸಿದೆ.
Advertisement
ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಹ್ಯಾಪನ್ ಮೀಟಿಂಗ್ ಆಪ್ ಜನರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಆಪ್ ಆಗಿದ್ದು, ವಿದೇಶಗಳಲ್ಲಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದೆ. ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 40 ಕ್ಕೂ ಹೆಚ್ಚಿನ ದೇಶಗಳ ಜನರು ಈ ಆಪನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
Advertisement
ಭಾರತದಲ್ಲಿ ಈ ಆಪ್‍ಗೆ ಬಾಲಿವುಡ್ ನಟ ಹೃತಿಕ್ ರೋಷನ್ ರಾಯಭಾರಿಯಾಗಿದ್ದಾರೆ. ವಿಶ್ವದಲ್ಲಿ ಒಟ್ಟು 2.8 ಕೋಟಿಗೂ ಅಧಿಕ ಜನ ಈ ಆಪನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಮುಂಬೈನಲ್ಲಿ ಉದ್ಘಾಟನೆ ಮಾಡಿದ 50 ದಿನದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಡೌನ್‍ಲೋಡ್ ಮಾಡಿದ್ದಾರೆ ಎಂದು ತಿಳಿಸಿದರು.
Advertisement
ಹ್ಯಾಪನ್ ಸಂಸ್ಥೆಯ ಸಿಇಒ ಡೈಡೆರ್ ರಪಾಪೊರ್ಟ್ ಮತ್ತು ಲಹರಿ ಸಂಸ್ಥೆಯ ಚಂದ್ರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
ನೀವು ಸಹ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಅಂದ್ರೆ ಗೂಗಲ್ ಪ್ಲೇ ಸ್ಟೋರ್/ ಐಟ್ಯೂನ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು
ಐಓಎಸ್ ಆಪ್ : happen
ಆಂಡ್ರಾಯ್ಡ್ ಆಪ್: happen