ಬೆಂಗಳೂರು: ಕನ್ನಡ ಎನ್ನುವುದು ಬರೀ ಭಾಷೆ ಮಾತ್ರ ಅಲ್ಲ. ಇಲ್ಲಿಯ ನೆಲ, ಜಲ ಕನ್ನಡದ ಜೊತೆಜೊತೆಗೆ ಬಂದು ನಿಲ್ಲುತ್ತವೆ. ಕನ್ನಡ ಮಾತಾಡುವುದು, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಎಷ್ಟು ಮುಖ್ಯವೋ ಅದೇ ರೀತಿ ಇಲ್ಲಿಯ ನೆಲ-ಜಲವನ್ನು ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ.
ಕಾವೇರಿ ರಾಜ್ಯದ ದಕ್ಷಿಣ ಭಾಗದಲ್ಲಿದ್ದರೂ ಇದು ಇಡೀ ಕನ್ನಡ ನಾಡಿಗೆ ತಾಯಿಯಿದ್ದಂತೆ. ರಾಜ್ಯೋತ್ಸವದ ದಿನವಾದ ಇಂದು ‘ಅಮ್ಮಾ ಕಾವೇರಿ’ ಹಾಡು ಪಬ್ಲಿಕ್ ಟಿವಿ ಮೂಲಕ ಬಿಡುಗಡೆಯಾಗಿದೆ. ಹಾಡಿನಲ್ಲಿ ಕಾವೇರಿಯ ನದಿಯ ವರ್ಣನೆ ಮಾಡಲಾಗಿದ್ದು, ನದಿಯ ವಿಹಂಗಮ ನೋಟವನ್ನು ನೋಡಬಹುದಾಗಿದೆ.
Advertisement
ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸರಸ್ವತಿ ಎಂ.ಡಿ.ಪಲ್ಲವಿ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಕವಿ ಎಚ್‍ಎಸ್ ವೆಂಕಟೇಶ್ ಮೂರ್ತಿ ಅವರ ಸಾಹಿತ್ಯವಿದೆ. ಕನ್ನಡದ ಪ್ರತಿಷ್ಠಿತ ಲಹರಿ ಸಂಗೀತ ಸಂಸ್ಥೆ ಈ ವಿಡಿಯೋ ಆಲ್ಬಂ ಹೊರತಂದಿದೆ.
Advertisement
Advertisement
Watch "Cauvery – in search of the waters" by Grammy Award Winner @rickykej, Sung by @MDPallavi – https://t.co/BI9mdg5VjZ#ಕರ್ನಾಟಕರಾಜ್ಯೋತ್ಸವ
— Lahari Music (@LahariMusic) November 1, 2017
Advertisement
Wishing everyone a Very Happy #KannadaRajyotsava
ಎಲ್ಲರಿಗು ಕನ್ನಡ ರಜ್ಯೋತ್ಸವದ ಹಾರ್ದಿಕ ಶುಭಾಶಯಗಳು
#ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ ???? pic.twitter.com/bvfEVcLvVa
— Lahari Music (@LahariMusic) November 1, 2017