ಖ್ಯಾತ ನಟ ಕಮಲ್ ಹಾಸನ್ ಅವರ ಹೊಸ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.
ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.
- Advertisement
- Advertisement
ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.
ಈ ಕುರಿತಂತೆ ಮೇಕಪ್ ಆರ್ಟಿಸ್ಟ್ ರಂಜಿತ್ ಅಂಬಾಡಿ ಎನ್ನುವವರು ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಇವರೆಲ್ಲ ಕೆಲಸ ಮಾಡಲಿದ್ದಾರೆ ಎಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಅಚ್ಚರಿಯ ಸಂಗತಿಗಳು ಈ ಸಿನಿಮಾದಲ್ಲಿ ಇರಲಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.
Web Stories