ಮೊಸರನ್ನು ಅನ್ನಕ್ಕೆ ಹಾಕಿ ಊಟ ಮಾಡುವ ಬದಲು ನೀವು ಸಾಂಬಾರ್ ಮಾಡಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಈ ಮೊಸರು ಬೆಂಡೆಕಾಯಿ ಸಾರಿನ ರುಚಿ ಒಂದು ಹಿಡಿ ಅನ್ನವನ್ನು ಹೆಚ್ಚೇ ನಿಮ್ಮ ಹೊಟ್ಟೆ ತಲುಪುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
Advertisement
ಬೇಕಾಗುವ ಸಾಮಗ್ರಿಗಳು:
* ಬೆಂಡೆಕಾಯಿ- ಕಾಲು ಕೆಜಿ
* ಈರುಳ್ಳಿ-1
* ಟೊಮೆಟೋ-1
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಮೊಸರು 2 ಕಪ್ ಸ್ವಲ್ಪ
* ತೆಂಗಿನ ತುರಿ- ಸ್ವಲ್ಪ
* ಗೋಡಂಬಿ 6-7
* ಗರಂ ಮಸಾಲ- 1 ಚಮಚ
* ಖಾರದ ಪುಡಿ- 1ಚಮಚ
* ಅರಿಶಿಣ ಪುಡಿ- ಅರ್ಧ
* ಅಡುಗೆ ಎಣ್ಣೆ- 4 ಚಮಚ
* ರುಚಿಗೆ ತಕ್ಕ ಉಪ್ಪು
* ಇಂಗು, ಸಾಸಿವೆ, ಜೀರಿಗೆ, ಉದ್ದಿನ ಬೇಳೆ- ಸ್ವಲ್ಪ
* ಒಣ ಮೆಣಸು-3
* ಕರಿ ಬೇವು- ಸ್ವಲ್ಪ
Advertisement
ಮಾಡುವ ವಿಧಾನ:
* ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
* ಗೋಡಂಬಿ, ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
Advertisement
Advertisement
* ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು ಹಾಕಿ, ಈರುಳ್ಳಿ, ಒಣ ಮೆಣಸನ್ನು ಹಾಕಿ ಫ್ರೈ ಮಾಡಿಕೊಳ್ಳಿ.
* ನಂತರ ಈಗಾಗಲೇ ರುಬ್ಬಿದ ಗೋಡಂಬಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ, ಮೊಸರು, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿಕೊಳ್ಳಿ. ಇದನ್ನೂ ಓದಿ: ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
* ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಹಾಕಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ಸವಿಯಲು ಸಿದ್ಧವಾಗುತ್ತದೆ.