ಬೆಂಗಳೂರು: ಕರ್ನಾಟಕ ಚುನಾವಣೆ-2018 ಫಲಿತಾಂಶ ಹೊರಬಿದಿದ್ದೆ. ಇನ್ನು ಈ ಚುನಾವಣೆಯಲ್ಲಿ ಕೆಲವು ಮಹಿಳಾ ಅಭ್ಯರ್ಥಿಗಳು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪ್ರತಿಸ್ಪರ್ಧಿ ಸಂಜಯ್ ಪಾಟೀಲ್ ವಿರುದ್ಧ 51,724 ಅಂತರದ ಮತಗಳನ್ನು ಪಡೆದು ತಮ್ಮ ಜಯವನ್ನು ಸಾಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟು 1,02,040 ಮತಗಳನ್ನು ಪಡೆದಿದ್ದಾರೆ.
Advertisement
ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪ್ರತಿಸ್ಪರ್ಧಿ ಪಾಂಡುರಂಗ ಪಾಟೀಲ್ ವಿರುದ್ಧ 8,506 ಅಂತರದಿಂದ ನಿಪ್ಪಾಣಿ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಶಿಕಲಾ ಒಟ್ಟು 87,006 ಮತಗಳನ್ನು ಪಡೆದಿದ್ದಾರೆ.
Advertisement
ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಪ್ರತಿಸ್ಪರ್ಧಿ ಅಶ್ವಿನಿ ಸಂಪಂಗಿ ವಿರುದ್ಧ 40,827 ಅಂತರದಿಂದ ಕೆಜಿಎಫ್ ಜನರ ಕೈ ಹಿಡಿದಿದ್ದಾರೆ. ರೂಪಕಲಾ ಅವರಿಗೆ ಒಟ್ಟು 87,006 ಮತಗಳನ್ನು ಪಡೆದಿದ್ದಾರೆ.
Advertisement
ಹಿರಿಯೂರು ಕ್ಷೇತ್ರದಲ್ಲಿ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ತಮ್ಮ ಪ್ರತಿಸ್ಪರ್ಧಿ ಡಿ.ಸುಧಾಕರ್ ವಿರುದ್ಧ 12,875 ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಕೆ. ಪೂರ್ಣಿಮಾ ಒಟ್ಟು 77,733 ಮತಗಳನ್ನು ಪಡೆದಿದ್ದಾರೆ.
Advertisement
ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತನ್ನ ಪ್ರತಿಸ್ಪರ್ಧಿ ವಿಟ್ಠಲ್ ಹಳಗೇಕರ್ ವಿರುದ್ಧ 5,133 ಅಂತರದಿಂದ ಜಯಗಳಿಸಿದ್ದಾರೆ. ಅಂಜಲಿ ಒಟ್ಟು 36,649 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ತನ್ನ ಪ್ರತಿಸ್ಪರ್ಧಿ ಆನಂದ ಅಸ್ನೋಟಿಕರ್ ವಿರುದ್ಧ 13,809 ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ರೂಪಾಲಿ ನಾಯ್ಕ್ ಒಟ್ಟು 59,776 ಮತಗಳನ್ನು ಪಡೆದಿದ್ದಾರೆ.