ಸೌತ್ ನಟಿ ಸಮಂತಾ (Samantha) ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ಕೊಂಚ ಚೇತರಿಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಡಿವೋರ್ಸ್ (Divorce) ಮತ್ತು ಆರೋಗ್ಯದ ಸ್ಥಿತಿ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್‌ಗೆ ವಿಲನ್ ಆದ ಅಭಿಷೇಕ್ ಬಚ್ಚನ್
ನಮ್ಮ ಜೀವನದ ಬಗ್ಗೆ ನಾವು ಕೆಲವು ವಿಷಯಗಳನ್ನು ಬದಲಾಯಿಸಬಹುದೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ನನ್ನಲ್ಲಿರುವ ವಿಷಯಗಳನ್ನು ನಾನು ಅನುಭವಿಸಬೇಕೇ ಎಂದು ನಾನು ಕೆಲವೊಮ್ಮೆ ಆಶ್ಚರ್ಯ ಪಡುತ್ತೇನೆ. ಆದರೆ ಹಿಂತಿರುಗಿ ನೋಡಿದಾಗ ನನಗೆ ಬೇರೆ ದಾರಿ ಇಲ್ಲ ಎಂಬ ಭಾವನೆ ಮೂಡುತ್ತದೆ ಎಂದಿದ್ದಾರೆ ಸಮಂತಾ. ಯಾವುದೇ ಸಮಸ್ಯೆಯಿಂದ ಹೊರಗೆ ಬರುವ ತನಕ ಹೋರಾಡಬೇಕು. ಇಂತಹ ಸಮಯದಲ್ಲಿಯೂ ನಾನು ಎಂದಿಗಿಂತಲೂ ಬಲಶಾಲಿಯಾಗಿರಬೇಕೆಂದು ಭಾವಿಸುತ್ತೇನೆ. ನಾನು ಬೆಂಕಿಯ ಹಾದಿಯಲ್ಲಿ ಸಾಗಿದ್ದೇನೆ ಎಂದಿದ್ದಾರೆ. ಡಿವೋರ್ಸ್ ಕುರಿತು ನಟಿ ಪರೋಕ್ಷವಾಗಿ ಮಾತನಾಡಿದ್ದಾರೆ.
ನನ್ನ ವೈಯಕ್ತಿಕ ಬೆಳವಣಿಗೆಗೆ ಅಧ್ಯಾತ್ಮ ಅವಿಭಾಜ್ಯ ಅಂಶವಾಗಿದೆ. ಇದು ನನ್ನ ಜೀವನದಲ್ಲಿ ನೆರವಾಗಿದೆ. ಅಧ್ಯಾತ್ಮವು ಉತ್ತಮ ಸ್ನೇಹಿತ ಮತ್ತು ಶಕ್ತಿಯ ಮೂಲವಾಗಿದೆ ಎಂದು ನಂಬುತ್ತೇನೆ ಎಂದು ಸಮಂತಾ ಮಾತನಾಡಿದ್ದಾರೆ.
ಅಂದಹಾಗೆ, ನಟ ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಸಮಂತಾ ಅಂತ್ಯ ಹಾಡಿದರು. 2022ರಲ್ಲಿ ಮಯೋಸಿಟಿಸ್ ಕಾಯಿಲೆಗೆ ತುತ್ತಾದ ಬಳಿಕ ನಟನೆಯಿಂದ ಬ್ರೇಕ್ ಪಡೆದರು.