Bengaluru CityDistrictsKarnatakaLatestMain Post

ಸಿದ್ದರಾಮಯ್ಯ ಬಗ್ಗೆ ಆಕ್ಷೇಪಾರ್ಹ ಮಾತು – ಕ್ಷಮೆ ಕೇಳಿದ ಮುಕುಡಪ್ಪ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕುರುಬ ಸಮುದಾಯದ (Kuruba Community) ಮುಖಂಡ ಮುಕುಡಪ್ಪ (Mukudappa) ಕ್ಷಮೆ ಕೇಳಿದ್ದಾರೆ.

ಟಗರು ಪದದ ಚರ್ಚೆ ವೇಳೆ ಅಶ್ಲೀಲ ಮಾತು ಆಡಿದ್ದು ನಿಜ. ಆದರೆ, ಅದು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಲ್ಲ ಎಂದು ಹೇಳಿದರು. ಕುರುಬರ ಮಠ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಅಂತ ಮುಕುಡಪ್ಪ ಗುಣಗಾನ ಮಾಡಿದ್ದಾರೆ.

ಇದಕ್ಕೂ ಮುನ್ನ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ಬಗ್ಗೆ ಅವಹೇಳಕಾರಿ, ಕೀಳುಮಟ್ಟದ ಪದ ಬಳಕೆ ಮಾಡಿದ ಮುಕಡಪ್ಪ ಮತ್ತು ಪುಟ್ಟಸ್ವಾಮಿ ವಿರುದ್ಧ ಮುಕುಡಪ್ಪರವರ ನಿವಾಸ ಎದುರು ಕುರುಬ ಸಮಾಜದ ಮುಖಂಡರು, ಸಿದ್ದರಾಮಯ್ಯರವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು. ಇದನ್ನೂ ಓದಿ: ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

ಏನಿದು ವಿವಾದ?: ನಿನ್ನೆ ಸುದ್ದಿಗೋಷ್ಠಿಯಲ್ಲಿ ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಇಬ್ಬರು 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡುತ್ತಿದ್ದರು. ಆ ವೇಳೆ ಮುಕುಡಪ್ಪ, ಯಾರು ಅಂತಾ ಅಲ್ಲ ಎಲ್ಲರೂ ಹೇಳುತ್ತಾರೆ. ಆಗ ಮುಕುಡಪ್ಪ, ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ ಅಷ್ಟೇ ಎಂದು ಹೇಳುತ್ತಾರೆ.

ಆಗ ಸಿದ್ದರಾಮಯ್ಯ ಅವರನ್ನು ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಮಾಡುತ್ತಾರೆ. ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು.. ಸೂ.. ಮಗಾ ಎಂದು ಹೇಳಿ ಮುಕ್ಕಡಪ್ಪ ನಗುತ್ತಾರೆ. ಅದಕ್ಕೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ಹೌದು, ಅವನು ಬುದ್ಧಿವಂತ.. ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಎಂದು ಹೇಳಿದ್ದರು. ಇದನ್ನೂ ಓದಿ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 5 ಸಾವು, 13 ಮಂದಿಗೆ ಗಂಭೀರ ಗಾಯ

Live Tv

Leave a Reply

Your email address will not be published. Required fields are marked *

Back to top button