ಬೆಂಗಳೂರು: ಎಲೆಕ್ಷನ್ ಸನಿಹದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸ್ವಾಗತಿಸಲು ಬೆಂಗಳೂರು(Bengaluru) ಸಜ್ಜಾಗುತ್ತಿದೆ. ಮೋದಿ ಶುಕ್ರವಾರ ಸಂಚರಿಸುವ ಮಾರ್ಗಗಳೆಲ್ಲಾ ಸರ್ವಾಂಗ ಸುಂದರವಾಗಿ ಬದಲಾಗಿವೆ. ಎಲ್ಲೆಡೆ ಕೇಸರಿ ಪತಾಕೆಗಳು ರಾರಾಜಿಸುತ್ತಿವೆ.
ಹೆಚ್‍ಎಎಲ್‍ನಿಂದ ಮೆಜೆಸ್ಟಿಕ್ ತನಕ ಒಂದೇ ಒಂದು ರಸ್ತೆಯಲ್ಲಿ, ಎಲ್ಲಿಯೂ ಒಂದೇ ಒಂದು ಗುಂಡಿಯೂ ಕಾಣುವುದಿಲ್ಲ. ಮೋದಿ ಕಾರಲ್ಲಿ ಬರುವಾಗ ಅಕ್ಕ ಪಕ್ಕ ಇಣುಕಿದ್ರೂ ಗುಂಡಿ ಕಾಣಬಾರದು. ಆ ರೀತಿಯಾಗಿ ಎಲ್ಲಾ ತಯಾರಿಗಳನ್ನು ಸರ್ಕಾರ ಮಾಡಿಕೊಂಡಿದೆ.
Advertisement
Advertisement
ಎಲ್ಲಾ ಕಡೆ ಭದ್ರತೆಯೂ ಡಬಲ್ ಆಗಿದೆ. ಮೋದಿ ಕಾರ್ಯಕ್ರಮ ಸಲುವಾಗಿ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಸವಾರರಿಗೆ ತೊಂದರೆ ಆಗದಿರಲಿ ಎಂದು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈಗಾಗಲೇ ಸೆಂಟ್ರಲ್ ರೈಲು ನಿಲ್ದಾಣ ಕೂಡ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
Advertisement
ತರಾತುರಿಯ ಕಾಮಗಾರಿಗಳ ವಿಚಾರವಾಗಿ ಸರ್ಕಾರವನ್ನು ಕೈನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಡಾಂಬರೀಕರಣದ ವೆಚ್ಚ ಹೇಳಲು ಬಿಬಿಎಂಪಿ ಹಿಂದೇಟು ಹಾಕಿದೆ. ಇದನ್ನೂ ಓದಿ: ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ
Advertisement
ಮೋದಿ ಬೆಂಗಳೂರು ಡೈರಿ
* ಬೆಳಗ್ಗೆ 9:00 – ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 9:30 – ಮೇಖ್ರಿ ವೃತ್ತದ ಬಳಿಯ ಹೆಲಿಪ್ಯಾಡ್‍ಗೆ
* ಬೆಳಗ್ಗೆ 9:45 – ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ
* ಬೆಳಗ್ಗೆ 10:20 – ಮೆಜೆಸ್ಟಿಕ್‍ನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 10:40 – ವಂದೇಭಾರತ್ ರೈಲಿಗೆ ಹಸಿರು ನಿಶಾನೆ
* ಬೆಳಗ್ಗೆ 10:45 – ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ
* ಬೆಳಗ್ಗೆ 11:20 – ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 11:30 – ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ಉದ್ಘಾಟನೆ
* ಮಧ್ಯಾಹ್ನ 12:00 – ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ
* ಮಧ್ಯಾಹ್ನ 12:30 – ಸಾರ್ವಜನಿಕ ಸಭೆ
ಯಾವ ರಸ್ತೆಗಳು ಬಂದ್?
* ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ನಗರದ ಹಲವು ರಸ್ತೆ ಬಂದ್
* ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್
* ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ,
* ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಸೇತುವೆಯಿಂದ – ರೈಲ್ವೆ ಸ್ಟೇಷನ್‍ವರೆಗೆ
* ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಬಂದ್
* ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿ.ಎಫ್ ವರೆಗೆ