ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸಿಎಂ ಆಗಬೇಕು ಅಂತಾ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ನಾನೂ ಹೇಳಿದ್ದೇನೆ ಅಂತಾ ಕುಣಿಗಲ್ ಶಾಸಕ ರಂಗನಾಥ್ (Ranganath) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಆಗುವ ಹೇಳಿಕೆ ಕೊಡಬಾರದು. ಕೆಲವು ವಿಚಾರದಲ್ಲಿ ನನಗೂ ಅಸಮಾಧಾನ ಇದೆ. ಆದರೆ ತುಮಕೂರು ವಿಚಾರದಲ್ಲಿ ನಾನು ಹೋಗಿ ಕೂತು, ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ
ರಾಜಣ್ಣನವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಅವರು ಬೇರೆ ಪಾರ್ಟಿಗೆ ಹೋಗಿ ಬಂದಿರಬಹುದು. ಆದ್ರೆ ಬಿಜೆಪಿಗೆ ಹೋಗೋ ನಿರ್ಧಾರ ಮಾಡಲ್ಲ. ಆ ವಿಚಾರದಲ್ಲಿ ಮಾತಾಡುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್
ಹೈಕಮಾಂಡ್ ವಿರುದ್ಧ ಮಾತಾಡಿದ್ದಕ್ಕೆ ವಜಾ ಮಾಡಿದ್ದಾರೆ. ಹೈಕಮಾಂಡ್‌ನವರೇ ಮಂತ್ರಿ ಮಾಡಿದ್ದಾರೆ. ರಾಜೇಂದ್ರ ಅವರು ದೊಡ್ಡ ರಾಜಕಾರಣಿ. ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ಅವರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಾನೂ ಸಾಥ್ ಕೊಟ್ಟಿದ್ದೇನೆ. ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಜಾರಿಕೊಂಡರು.