ಹುಬ್ಬಳ್ಳಿ: ನನಗೆ ಮೋದಿ (Narendra Modi) ಅಂದ್ರೆ ತುಂಬಾ ಪ್ರೀತಿ ಮತ್ತು ಅಭಿಮಾನ, ಅವರನ್ನು ನೋಡಿ ಖುಷಿ ತಡೆಯಲಾಗದೆ ಅವರತ್ತ ತೆರಳಿ ಹಾರ ಹಾಕುವ ಪ್ರಯತ್ನ ಮಾಡಿದೆ ಎಂದು ಎಸ್ಪಿಜಿ, ಪೊಲೀಸ್ ಸರ್ಪಗಾವಲನ್ನು ಭೇದಿಸಿ ತನ್ನ ನೆಚ್ಚಿನ ಪ್ರಧಾನಿ ಮೋದಿಗೆ ಹೂ ಹಾರಹಾಕಿ ಸದ್ಯ ದೇಶದಲ್ಲಿ ಸುದ್ದಿಯಲ್ಲಿರುವ ಕುನಾಲ್ ದೊಂಗಡಿ (Kunal Dongadi) ಮಾತಾಗಿದೆ.
Advertisement
12 ವರ್ಷದ ಕುನಾಲ್ ದೊಂಗಡಿ ಹುಬ್ಬಳ್ಳಿಯ ತೊರವಿಹೆಕ್ಕಲದ ನಿವಾಸಿ. ಕುನಾಲ್ ಕುಟುಂಬ ಆರ್ಥಿಕವಾಗಿ ಸಬಲವಾಗಿದೆ. ಜೊತೆಗೆ ರಾಷ್ಟ್ರೀಯತೆ, ಹಿಂದುತ್ವ, ಮತ್ತು ಆರ್ ಎಸ್ ಎಸ್ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿ ಹೊಂದಿದೆ. ಇದು ಕುನಾಲ್ ಪ್ರಧಾನಿಯ ಮೋದಿಯವರ ಪ್ರಭಾವಕ್ಕೆ ಒಳಗಾಗುವಂತೆ ಮಾಡಿತ್ತು. ಇದನ್ನೂ ಓದಿ; ಮೋದಿಗೆ ಹಾರ ನೀಡಲು ಬಂದಿದ್ದು 10ರ ಬಾಲಕ – ಭದ್ರತೆಯಲ್ಲಿ ಲೋಪ ಆಗಿಲ್ಲ
Advertisement
Advertisement
ಕುನಾಲ್ ಎಂಟು ವರ್ಷದವನಿದ್ದಾಗ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಬಂದಿದ್ದರು. ಇದರಿಂದ ಕುನಾಲ್ ಮತ್ತೆ ಪುಳಕಿತನಾಗಿದ್ದ. ಈಗ ಮತ್ತೆ ಮೋದಿಯವರು ಹುಬ್ಬಳ್ಳಿ ಬರುತ್ತಿರುವ ಸುದ್ದಿ ತಿಳಿದ ಕುನಾಲ್ ಮತ್ತು ಅವರ ಕುಟುಂಬದವರ ಜೊತೆ ಮೋದಿಯವರು ನೋಡಲು ಬಹಳಷ್ಟು ಉತ್ಸುಕರವಾಗಿತ್ತು. ಅದರಂತೆ ಗುರುವಾರ ಕುನಾಲ್, ಮಾವ ಷಣ್ಮುಖ, ತಾತ ಮೋಹನ ಜೊತೆಗೆ ತನ್ನ ಚಿಕ್ಕ ಸೊಸೆ ಬ್ರಾಹ್ಮಣಿಗೆ ಆರ್ ಎಸ್ ಎಸ್ (RSS) ಪೋಷಾಕು ಹಾಕಿಸಿಕೊಂಡು ಎಲ್ಲರೂ ಮೋದಿ ನೋಡಲು ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಸಾಮ್ರಾಟ್ ಕಲ್ಯಾಣ ಮಂಟಪದ ಬಳಿ ನಿಂತಿದ್ದರು.
Advertisement
ರೋಡ್ ಶೋ (Modi Road Show) ನಲ್ಲಿ ಮೋದಿಯವರು ಇವರ ಬಳಿ ಬಂದ್ರೆ, ಗಣವೇಷ ಹಾಕಿದ್ದ ಚಿಕ್ಕ ಮಗು ಬ್ರಾಹ್ಮಣಿ ಕೈಯಲ್ಲಿ ಹಾರ ಹಾಕಿಸುವ ಪ್ಲಾನ್ ಕುಟುಂಬದ್ದಾಗಿತ್ತು. ಆದರೆ ಮೋದಿಯವರ ಇವರ ಸಮೀಪ ಬರಲೇ ಇಲ್ಲ. ಇದರ ಜೊತೆಗೆ ಮೋದಿಯವರನ್ನು ಕಂಡು ಉದ್ವೇಗೊಂಡ ಕುನಾಲ್ ಮಾಲೆ ಹಿಡಿದು ಮೋದಿಯತ್ತ ತೆರಳಿದ್ದಾನೆ. ನಾನು ನುಗ್ಗಿದಾಗ ಪೊಲೀಸರು ನನ್ನ ಪಕ್ಕಕ್ಕೆ ತಳ್ಳಿದರು. ಆದರೆ ಮೋದಿಯವರು ನನ್ನ ಹಾರ ತೆಗೆದುಕೊಂಡರು ಮತ್ತು ಅವರ ಎಡಗೈ ನನಗೆ ತಾಕಿತು ಇದರಿಂದಾಗಿ ನನಗೆ ತುಂಬಾ ಖುಷಿಯಾಗಿದೆ ಎಂದು ಕುನಾಲ್ ಹೇಳಿದ್ದಾನೆ. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕೆ ಮೋದಿ ಕಿಕ್ಸ್ಟಾರ್ಟ್ – ಅಸಲಿಗೆ ಕಾರ್ಯಕ್ರಮ ಪಟ್ಟಿಯಲ್ಲಿ ರೋಡ್ ಶೋ ಇರಲಿಲ್ಲ
ಈ ಘಟನೆಯಿಂದ ಕುನಾಲ್ ಕುಟುಂಬಕ್ಕೆ ಒಂದು ಸಂತಸ ಮತ್ತೊಂದು ಕಡೆ ಆತಂಕ ಎರಡು ಶುರುವಾಗಿದೆ. ಮೋದಿಯವರನ್ನು ಬಹಳಷ್ಟು ಹತ್ತಿರದಿಂದ ನಮ್ಮ ಮನೆ ಹುಡುಗ ಕುನಾಲ್ ಕಂಡಿದ್ದು ಬಹಳಷ್ಟು ಖುಷಿಕೊಟ್ಟಿದೆ. ಆದರೆ ಇದು ಪ್ರಧಾನ ಮಂತ್ರಿಗಳ ಭದ್ರತೆ ವಿಚಾರ ಹೀಗಾಗಿ ಯಾರು ಸಹ ಮುಂದೆ ಈ ಪ್ರಯತ್ನ ಮಾಡಬಾರದು ಅಂತ ಕುನಾಲ್ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇದೇ ಕುನಾಲ್ ಸಮಾಜದ ವತಿಯಿಂದ ಕುನಾಲ್ ಗೆ ಸನ್ಮಾನ ಸಹ ಮಾಡಲಾಗಿದೆ.
ಒಟ್ಟಿನಲ್ಲಿ ಪ್ರಧಾನಿಗಳ ಭದ್ರತಾ ಚಕ್ರವ್ಯೂಹ ಭೇದಿಸಿ ಮೋದಿಯವರನ್ನು ಹತ್ತಿರದಿಂದ ಕಂಡು, ಹಾರ ಹಾಕಿದ ಕುನಾಲ್ ಧೈರ್ಯ ಮತ್ತು ಅಭಿಮಾನಕ್ಕೆ ಮೆಚ್ಚಲೇಬೇಕು. ಆದರೆ ಇದು ಪ್ರಧಾನಿಗಳ ಭದ್ರತಾ ವಿಚಾರವಾಗಿದ್ದು, ಇಂತಹ ಘಟನೆ ಮತ್ತೊಮ್ಮೆ ನಡೆಯಬಾರದು ಎಂಬುದು ಜನರ ಮಾತಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k