– ನಿರ್ಮಲಾ ಸೀತಾರಾಮನ್ ವಿರುದ್ಧ ಕಾಮ್ರಾ ವ್ಯಂಗ್ಯ – ವಿಡಿಯೋ ವೈರಲ್
ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ (Eknath Shinde) ವಿರುದ್ಧ ʻದೇಶದ್ರೋಹಿʼ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ (Stand up comedian Kunal Kamra)ಗೆ ಪೊಲೀಸರು 2ನೇ ಸಮನ್ಸ್ ಜಾರಿಗೊಳಿಸಿದ್ದಾರೆ.
🍿 🍿 🍿 pic.twitter.com/KiDBbvaxSL
— Kunal Kamra (@kunalkamra88) March 26, 2025
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಸಲ್ಲಿಸಿದ ದೂರಿನ ಮೇರೆಗೆ ಮುಂಬೈನ ಖಾರ್ ಪ್ರದೇಶದ ಪೊಲೀಸರು ಕಾಮ್ರಾಗೆ 2ನೇ ನೋಟಿಸ್ ಜಾರಿಮಾಡಿದ್ದು, ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲಾವಕಾಶ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ
ಕುನಾಲ್ ಕಾಮ್ರಾ ಹೇಳಿದ್ದೇನು?
ಮುಂಬೈನ (Mumbai) ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇದು ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಕೋಲಾಹಲ ಎಬ್ಬಿಸಿತ್ತು.
ಇದರಿಂದ ರೊಚ್ಚಿಗೆದ್ದ ಶಿವಸೇನೆ ಶಿಂಧೆ ಬಣದ ಕಾರ್ಯಕರ್ತರು ಕಾರ್ಯಕ್ರಮ ನಡೆದ ಸ್ತಳದಲ್ಲಿ ದಾಂಧಲೆ ನಡೆಸಿದ್ದರು. ಈ ಆರೋಪದ ಮೇಲೆ ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಮತ್ತು 11 ಮಂದಿ ಇತರರನ್ನು ಬಂಧಿಸಿದ್ದಾರೆ. ದಾಂಧಲೆ ನಡೆಸಿದವರ ಪೈಕಿ 15-20 ಮಂದಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್
ಸೀತಾರಾಮನ್‌ಗೆ ಸರ್ವಾಧಿಕಾರಿ ಎಂದು ಟೀಕೆ
ಕುನಾಲ್ ಕಾಮ್ರಾ ಬುಧವಾರ ಹೊಸ ಪ್ಯಾರಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಿದ್ದರು. ಬಿಜೆಪಿಯನ್ನ ʻಸರ್ವಾಧಿಕಾರಿʼ ಎಂದು ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರನ್ನ ಟೀಕಿಸಲು ಕಾಮ್ರಾ ʻಮಿಸ್ಟರ್ ಇಂಡಿಯಾʼ ಚಿತ್ರದ ʻಹವಾ ಹವಾಯಿʼ ಹಾಡಿನ ಪ್ಯಾರಡಿಯನ್ನ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ, ಕಾಮೆಡಿಯನ್ ಇಬ್ಬರೂ ಸಂವಿಧಾನ ಓದಿಲ್ಲ – ಕಾಮ್ರಾ ವಿರುದ್ಧ ಕಾನೂನು ಕ್ರಮ: ಫಡ್ನವಿಸ್
ʻಟ್ರಾಫಿಕ್ ಜಾಮ್ ಮಾಡಲು ಇವಳು ಬಂದಳು, ಸೇತುವೆ ಕೆಡವಲು ಇವಳು ಬಂದಳು, ಇದನ್ನ ಸರ್ವಾಧಿಕಾರ ಎನ್ನುತ್ತಾರೆ. ಜನರ ದುಡಿಮೆಯನ್ನ ಲೂಟಿ ಮಾಡಲು ಇವಳು ಬಂದಳು, ಸೀರೆ ಹುಟ್ಟೋ ಅಕ್ಕ ಬಂದಳು, ಸಂಬಳ ಕದಿಯಲು ಇವಳು ಬಂದಳು, ಮಧ್ಯಮ ವರ್ಗವನ್ನ ತುಳಿಯಲು ಇವಳು ಬಂದಳು, ಪಾಪ್‌ಕಾರ್ನ್ ತಿನ್ನಿಸಲು ಇವಳು ಬಂದಳು, ಇದನ್ನ ನಿರ್ಮಲಾ ತಾಯಿ ಎನ್ನುತ್ತಾರೆʼ ಎಂದು ಹಾಡಿದ್ದರು. ಇದು ಕಾಮ್ರಾ ವಿರುದ್ಧ ಮತ್ತಷ್ಟು ಆಕ್ರೋಶ ಹೆಚ್ಚಿಸಲು ಕಾರಣವಾಯಿತು.