ಮೈಸೂರು: ಫೆ.11, 11 ಮತ್ತು 12ರಂದು ಮೂರು ನದಿಗಳ ಸಂಗಮದ ಸ್ಥಳವಾದ ಟಿ.ನರಸೀಪುರದಲ್ಲಿ (T Narasipura) ಕುಂಭಮೇಳ (Kumbh Mela) ನಡೆಯಲಿದೆ ಎಂದು ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ (HC Mahadevappa) ಹೇಳಿದ್ದಾರೆ.
ಟಿ.ನರಸೀಪುರದಲ್ಲಿ ಕುಂಭಮೇಳ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ಜರುಗಲಿದೆ. ಕುಂಭಮೇಳಕ್ಕೆ 10 ಕೋಟಿ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಲ್ಲಿಸಿದೆ. ಕಳೆದ ಬಾರಿ 4 ಕೋಟಿ ಕೊಟ್ಟಿದ್ದರು. ಈ ಬಾರಿ 5 ರಿಂದ 6 ಕೋಟಿ ಸರ್ಕಾರ ಕೊಡಬಹುದು. ಮೂರು ದಿನಗಳ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಬಣ ಕಚ್ಚಾಟ – ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ
Advertisement
Advertisement
ಪುಣ್ಯಸ್ನಾನಕ್ಕೆ ನೀವು ಭಾಗಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಡೈಲಿ ಪುಣ್ಯ ಸ್ನಾನ ಮಾಡುತ್ತಿದ್ದೇನೆ. ಧಾರ್ಮಿಕ ಆಚರಣೆಗಳಿಗೆ ವೈಯಕ್ತಿಕ ವಿರೋಧ ಇಲ್ಲ. ಅವರವರ ಧಾರ್ಮಿಕ ನಂಬಿಕೆ ಆಚರಿಸುವುದು ಸಂವಿಧಾನತ್ಮಕ ಹಕ್ಕು ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಸೋಂಕು – ಆತಂಕದಲ್ಲಿ ಕಾಫಿನಾಡ ಜನ
Advertisement