ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರನ್ನು ಕರೆದಿಲ್ಲ. ಸೃಷ್ಟಿ ಮಾಡಿ ಸುದ್ದಿ ಮಾಡಬಾರದು. ಸುಳ್ಳು ಸುದ್ದಿಯಿಂದ ನನಗೆ ನೋವಾಗಿದೆ ಅಂತ ಮಾಜಿ ಪ್ರಧಾನಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಕುಮಾರಸ್ವಾಮಿ ಪ್ರಧಾನಿ ಹಾಗೂ ಕೇಂದ್ರ ಮಂತ್ರಿಗಳನ್ನು ಭೇಟಿ ಆಗಿ ಬರುತ್ತಾರೆ. ಕಲ್ಲಿದ್ದಲು ಕಡಿಮೆ ಇರೋದ್ರಿಂದ ಸದನ್ನ ಸಪ್ಲೈ ಮಾಡಲು ಮನವಿ ಮಾಡುತ್ತಾರೆ. ಕುಮಾರಸ್ವಾಮಿ ಸನ್ನಿವೇಶದ ಶಿಶು. ಅವರ ಹೇಳುತ್ತಿರುವುದು ನಿಜ. ನನಗೂ ಆ ನೋವಿದೆ ಅಂದ್ರು.
ಇದೇ ವೇಳೆ ಯಡಿಯೂರಪ್ಪ ಸದನದಲ್ಲಿ ಭಾಷಣದ ಕುರಿತು ಮಾತನಾಡಿದ ಅವರು, ಇತಿಹಾಸದಲ್ಲಿ ಅಂತಹ ಕೆಳಮಟ್ಟದ ಭಾಷೆ ಬಳಕೆ ಮಾಡಿದ್ದು ನಾನು ನೋಡಿಲ್ಲ ಎಂದು ಹೇಳಿ ಯಡಿಯೂರಪ್ಪ ವಿರುದ್ಧ ಎಚ್ ಡಿಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂದ್ ಬೇಕಾದರೆ ಮಾಡಿಕೊಳ್ಳಲಿ. ಆರೂವರೆ ಕೋಟಿ ಜನ ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 38 ಜನ ಇಟ್ಟುಕೊಂಡು ನಾವು ಹೇಗೆ ನಿರ್ಧಾರ ಮಾಡೋಕೆ ಆಗುತ್ತೆ. ಕುಮಾರಸ್ವಾಮಿ ಅದನ್ನೇ ಹೇಳಿದ್ದಾರೆ. ಸಿಎಂ ನೀವೇ ಆಗಿ ಎಂದು ಕಾಂಗ್ರೆಸ್ ಅವರಿಗೆ ನಾವೇ ಹೇಳಿದ್ದೀವಿ. ಆದರೆ ಕಾಂಗ್ರೆಸ್ ಅವರೇ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಹೇಳಿದ್ದರು ಎಂದು ದೇವೇಗೌಡ ತಿಳಿಸಿದ್ದಾರೆ.
ಪ್ರಣಾಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹಣಕಾಸು ಇಲಾಖೆ ಕಾಂಗ್ರೆಸ್ ಕೇಳುತ್ತಿದ್ದಾರೆ. ಇನ್ನು ತೀರ್ಮಾನವಾಗಿಲ್ಲ. ಏನಾಗುತ್ತೋ ಮುಂದೆ ನೋಡೋಣ. ರೈತರ ಸಾಲಮನ್ನಾ ಮಾಡಿಲ್ಲ ಎಂದರೆ ರಾಜೀನಾಮೆ ನೀಡುತ್ತೀನಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.