ಚಿಕ್ಕಬಳ್ಳಾಪುರ: ವಿಧಾನಪರಿಷತ್ ಚುನಾವಣೆಯಲ್ಲಿ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಬೆಂಬಲ ಕೋರಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ನಗರದ ಪತ್ರಕರ್ತರ ಭವನದಲ್ಲಿ ವಿಧಾನಪರಿಷತ್ ಚುನಾವಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಸಾರ್ವಜನಿಕವಾಗಿ ಅನೇಕ ಕಡೆ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಬೆಂಬಲ ಕೋರಿರೋದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ನನ್ನ ಬಳಿ ಫೋನ್‍ನಲ್ಲಿ ಮಾತಾಡಿದ್ದಾರೆ. ಗೌರವಯುತವಾಗಿ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ನವರು ತಮ್ಮ ರಾಜಕೀಯ ಏರಿಳಿತದ ಬೆಳವಣಿಗೆಗಳ ನಡುವೆ ಮನವಿ ಮಾಡಿದ್ದಾರೆ. ನಾಳೆಯಿಂದ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿದ್ದು ಮುಂದಿನ ವಿಧಾನಸಭೆ ಚುನಾವಣೆ ಗುರಿಯಾಗಿರಿಸಿಕೊಂಡು 123 ಸ್ಥಾನಗಳ ನಮ್ಮ ಗುರಿಯನ್ನು ರೀಚ್ ಆಗುವ ನಿಟ್ಟಿನಲ್ಲಿ ನಮ್ಮ ಪಕ್ಷದ ಮುಖಂಡರ ಜೊತೆ ಅವರ ಮಾಹಿತಿ ಸಲಹೆ ಪಡೆದು ಬೆಂಬಲ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಳಗ್ಗೆ ನಮ್ಮ ತೋಟದಲ್ಲಿ ಜೋರು ಶಬ್ಧದ ಅನುಭವ ಆಯ್ತು: ಎಚ್‍ಡಿಕೆ
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿಯವರು ನನ್ನ ಜೊತೆ ಚರ್ಚೆ ಮಾಡಿಲ್ಲ. ವಿಧಾನಪರಿಷತ್ ಚುನಾವಣೆ ಸಂಬಂಧ ಸುದೀರ್ಘವಾಗಿ ಮಾತನಾಡಿದ ಎಚ್‍ಡಿಕೆ, ಕಳೆದ ಚುನಾವಣೆಯಲ್ಲಿ 4 ಮಂದಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಬಾರಿ 06 ಕ್ಷೇತ್ರದ ಅಭ್ಯರ್ಥಿಗಳಿಗೆ ಸೀಮಿತ ಮಾಡಿದ್ದೇವೆ. ಆದರೆ ಇದಕ್ಕೆ ಒಂದು ಪಕ್ಷ ನಮ್ಮ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಅವರಿಗೆ ಮಾತಾಡಲು ಬೇರೆ ಏನೂ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ಅಭ್ಯರ್ಥಿ ಹಾಕಿದ್ರೆ ಒಂದು ಮಾತು ಹಾಕದಿದ್ರೇ ಮತ್ತೊಂದು ರೀತಿ ಟೀಕೆ ಮಾಡುತ್ತಾರೆ. ನಮ್ಮಿಂದಲೇ ಬೆಳೆದ ಕೆಲ ನಾಯಕರು ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಹೇಗೆ ಬದುಕ್ಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನು ಮಾಡ್ಬೇಕು ಅನ್ನೋದಕ್ಕೆ ಪುನೀತ್ ಮಾದರಿ: ರಾಜಮೌಳಿ
Advertisement
ಜಮೀರ್ ಅಹಮ್ಮದ್ ಖಾನ್ ಆ ಮುಸಲ್ಮಾನ ಯಾವ ಪಕ್ಷದಿಂದ ಮೇಲೆ ಬಂದ ಅಂತ ತಿಳಿಯದೆ ಸೌಜನ್ಯ ಇಲ್ಲದೆ ಮಾತನಾಡುತ್ತಿದ್ದಾನೆ. 25 ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿರುವ ಎಲ್ಲಾ ಕಡೆ ತ್ರಿಕೋನ ಸ್ಪರ್ಧೆ ಇದೆ. ನಾವು ಒಳ ಒಪ್ಪಂದ ಮಾಡಿಕೊಂಡಿದ್ದರೆ. ಬಿಜೆಪಿಯವರು ಅಭ್ಯರ್ಥಿ ಹಾಕಬಾರದಿತ್ತಲ್ಲಾ..? ಕೋಲಾರ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸದಸ್ಯರು ಎಷ್ಟಿದ್ದಾರೆ..? ಬೆಂಗಳೂರು ಗ್ರಾಮಾಂತರ ದಲ್ಲಿ ಎಷ್ಟಿದ್ದಾರೆ..? ಬಿಜೆಪಿ ಯಾಕೆ ಅಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ? ಒಳ ಒಪ್ಪಂದವೇ ಆಗಿದ್ದರೆ ನಮ್ಮ ಬಗ್ಗೆ ಬಿಜೆಪಿ ಯವರ ಮೃದು ಧೋರಣೆ ಇರಬೇಕಲ್ವಾ.? ಯಾಕೆ ಇಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಹೊಗಳಿದ್ದರು: ಕೋಟಾ ಶ್ರೀನಿವಾಸ ಪೂಜಾರಿ
ಈ ಹಿಂದೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಎಚ್ ಮುನಿಯಪ್ಪ ಸೋಲಲು ಕಾರಣ ಯಾರು..? ಕೆ.ಎಚ್ ಮುನಿಯಪ್ಪ ಸೋಲಲು ಯಾರು ಕಾರಣ ಎಂಬುದು ಜಗಜ್ಜಾಹೀರಾಗಿದೆ. ದಲಿತ ಹಿರಿಯ ಕಾಂಗ್ರೆಸ್ ನಾಯಕರನ್ನು ಸೋಲಿಸಿದ್ದು ಯಾರು.? ನಾವು ಚೂರಿ ಹಾಕುವ ಕೆಲಸ ಮಾಡಿಲ್ಲ. ಈ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಇವತ್ತು 6 ಕ್ಷೇತ್ರದಲ್ಲಿ ಯಾವ ಪಕ್ಷಗಳ ಹಂಗು ಇಲ್ಲದೆ ಮತದಾರರ ಮನವೊಲಿಸಿ ಆಶೀರ್ವಾದ ಪಡೆಯಲು ಹೊರಟಿದ್ದೇವೆ. ಉಳಿದ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ಯಾವ ಪಕ್ಷ ಗೆಲ್ಲಬೇಕು ಎಂಬ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ. ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ನವರು ಎರಡು ಮೂರು ಸಭೆಯಲ್ಲಿ ಜೆಡಿಎಸ್ ಬೆಂಬಲವನ್ನು ಕೇಳಿದ್ದಾರೆ. ಯಡಿಯೂರಪ್ಪನವರು ನೇರವಾಗಿ ಸಾರ್ವತ್ರಿಕವಾಗಿ ಬೆಂಬಲ ಕೋರಿ ಮನವಿ ಮಾಡಿದ್ದಾರೆ ಆ ಸಂಸ್ಕೃತಿ ಯಡಿಯೂರಪ್ಪನವರಲ್ಲಿ ನೋಡಿದ್ದೇನೆ. ಬಿಜೆಪಿ ಅಧಿಕಾರದಿಂದ ಇಳಿಸಿದ್ದರೂ ಪಕ್ಷದ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ಮಹಾನ್ ಕಾಂಗ್ರೆಸ್ ನಾಯಕರು ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಅಂತ ಘೋಷಣೆ ಮಾಡಿದ್ದಾರೆ. ಈಗ ನಾನು ಯಾರ ಪರವಾಗಿ ತೀರ್ಮಾನ ಮಾಡಬೇಕು? ಈಗ ನಾನು ಬಿಜೆಪಿಗೆ ಬೆಂಬಲ ಕೊಡಬೇಕೋ ಕಾಂಗ್ರೆಸ್‍ಗೆ ಕೊಡಬೇಕೋ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.