ಬೆಂಗಳೂರು: 2018-19ನೇ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು ಜಿಎಸ್‍ಟಿ ನಷ್ಟ ಪರಿಹಾರ ಸೇರಿದಂತೆ 2017-2018ನೇ ಸಾಲಿನ ಪರಿಷ್ಕøತ ಅಂದಾಜು ಮೀರಿ ಶೇ.16.25 ರ ಹೆಚ್ಚಳದೊಂದಿಗೆ ಸಾಲಿನ ಪರಿಷ್ಕøತ ಅಂದಾಜು ಮೀರಿ ಶೇ. 16.25ರ ಹೆಚ್ಚಳದೊಂದಿಗೆ 1,06,621 ಕೋಟಿ ರೂ.ಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ತೆರಿಗೆಯೇತರ ರಾಜಸ್ವಗಳಿಂದ 8,181 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 36,215 ಕೋಟಿ ರೂ.ಗಳನ್ನು ಹಾಗೂ 15,379 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 47,134 ಕೋಟಿ ರೂ.ಗಳ ಒಟ್ಟು ಸಾಲಗಳು ಮತ್ತು 75 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 129 ಕೋಟಿ ರೂ.ಗಳ ಸಾಲಗಳ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ.
Advertisement
ರಾಜ್ಯದ ಒಡೆತನದ ವಿವಿಧ ಮಂಡಳಿಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲ ಸೃಜನೆಯ ಮೂಲಕ ಹಾಗೂ ತಮ್ಮ ಹಣಕಾಸು ಸಾಮಥ್ರ್ಯ ಮತ್ತು ಸ್ವಂತ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 16,760 ಕೋಟಿ ರೂ.ಗಳನ್ನು ಕ್ರೋಢಿಕರಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ.
Advertisement
ಒಂದು ರೂ. ಬಂದಿದ್ದು ಹೇಗೆ?
ರಾಜ್ಯ ತೆರಿಗೆ- 49 ಪೈಸೆ
ಸಾಲ- 21 ಪೈಸೆ
ಕೇಂದ್ರ ತೆರಿಗೆ- 17 ಪೈಸೆ
ಕೇಂದ್ರ ಸರ್ಕಾರದ ಅನುದಾನ – 7 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವ – 4 ಪೈಸೆ
ಸಾರ್ವಜನಿಕ ಲೆಕ್ಕ – 2 ಪೈಸೆ
Advertisement
Advertisement
ಒಂದು ರೂ. ಹೋಗಿದ್ದು ಹೇಗೆ?
ಕೃಷಿ ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ -19 ಪೈಸೆ
ಶಿಕ್ಷಣ -12 ಪೈಸೆ
ಇತರ ಆರ್ಥಿಕ ಸೇವೆಗಳು -14 ಪೈಸೆ
ಸಾಲ ತೀರಿಕೆ – 13 ಪೈಸೆ
ಸಮಾಜ ಕಲ್ಯಾಣ -12 ಪೈಸೆ
ಇತರ ಸಾಮಾಜಿಕ ಸೇವೆಗಳು- 5 ಪೈಸೆ
ಆರೋಗ್ಯ -4 ಪೈಸೆ
ನೀರು ಪೊರೈಕೆ ಮತ್ತು ನೈರ್ಮಲ್ಯ -3 ಪೈಸೆ
ಇತರ ಸಾಮಾನ್ಯ ಸೇವೆಗಳು – 17 ಪೈಸೆ