ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಲೂಟಿ ಮಾಡೋದು ಬಿಟ್ಟರೆ ಅವರನ್ನ ನನ್ನ ತಮ್ಮ ಅಂತ ಒಪ್ಪಿಕೊಳ್ತೀನಿ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಷರತ್ತು ವಿಧಿಸಿದ್ದಾರೆ.
ತಮಿಳುನಾಡಿಗೆ (Tamilnadu) ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್ ವಿಚಾರ ಇಟ್ಟುಕೊಂಡು ಮಾತನಾಡಿದ್ದ ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಾನು ಟ್ವೀಟ್ ನಲ್ಲಿ ನೀರು ಬಿಡು ಅಂತ ಹೇಳಿಲ್ಲ. ನನ್ನ ಟ್ವೀಟ್ ನಲ್ಲಿ ಅಣ್ಣ-ತಮ್ಮಂದಿರ ರೀತಿ ಇರಬೇಕು ಅಂತ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಪರಿಹಾರ ಸಿಗೊಲ್ಲ. ಹೀಗಾಗಿ ಕೊಟ್ಟು ತೆಗೆದುಕೊಳ್ಳಬೇಕು ಅಂತ ಹೇಳಿದ್ದೇನೆ. ನಾವು ಎಂದೂ ಸಹ ತಮಿಳುನಾಡು ರೈತರಿಗೆ ನಮ್ಮ ರೈತರು ಅನ್ಯಾಯ ಮಾಡಿಲ್ಲ. ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ ಅಂತ ಹೇಳಿದ್ದೇನೆ. ಇದನ್ನ ಹೇಳಿದ್ದು ತಪ್ಪಾ? ನಾನು ನೀರು ಬಿಡುತ್ತೇನೆ ಅಂತ ಹೇಳಿರಲಿಲ್ಲ ಅಂತ ಡಿಕೆಶಿವಕುಮಾರ್ ತಿರುಗೇಟು ಕೊಟ್ರು.
Advertisement
Advertisement
ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡ್ತೀರಾ. ಉಡಾಫೆ ರಾಜಕೀಯ ಮಾಡಬೇಡಿ. ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಾ. ಮಾತೆತ್ತಿದರೆ ಪೆನ್ನು ಕೊಡಿ ಪೆನ್ನು ಕೊಡಿ ಅಂತ ಕೇಳ್ತಿದ್ದರು. ನಮ್ಮ ರಾಜ್ಯ ಹಾಳು ಮಾಡೋಕೆ ಪೆನ್ನು ಕೇಳಿದ್ರಾ? ನಮ್ಮ ರೈತರನ್ನ ಕಡೆಗಣಿಸಿ ಬೇರೆ ಯಾರನ್ನೊ ಮೆಚ್ಚಿಸೋಕೆ ಪೆನ್ನು ಕೇಳಿದ್ರಾ? ಹುಡುಗಾಟ ಆಡಬೇಡಿ. ಉತ್ತರ ಕೊಡೋವಾಗ ನೀರಾವರಿ ಸಚಿವರ ಸ್ಥಾನ ಗಾಂಭೀರ್ಯತೆಯನ್ನ ಕಾಪಾಡಿಕೊಳ್ಳಿ. ಬಿಚ್ಚೋದು ಬಿಚ್ಚೋದು ಅಂತ ಮಾತಾಡಬೇಡಿ. ನೀವು ಮಾಡಿರೋ ಅವ್ಯವಹಾರಗಳು ಸಾಕಷ್ಟು ಇವೆ. ಜಗತ್ ಜಾಹೀರು ಆಗಿವೆ. ಹಿಂದೆ ಏನೋ ಮಾಡಿಕೊಂಡು ಆಯ್ತು. ಈಗಲಾದರೂ ಗೌರವಯುತವಾಗಿ ಕೆಲಸ ಮಾಡಿ. ಜನ ಅಧಿಕಾರ ಕೊಟ್ಟಿದ್ದಾರೆ ಅಂತ ವಾಗ್ದಾಳಿ ನಡೆಸಿದರು.
Advertisement
Advertisement
ರಾಜ್ಯ ಲೂಟಿ ಮಾಡೋದು ನಿಲ್ಲಿಸಿ. ಅಣ್ಣನಾಗಿ ನನ್ನ ಈ ಸಲಹೆ ಸ್ವೀಕಾರ ಮಾಡಿ. ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಲೂಟಿ ಹೊಡೆಯೋದು ಬಿಡಿ ಎಂಬ ನನ್ನ ಸಲಹೆ ಸ್ವೀಕಾರ ಮಾಡಿ ಇನ್ನು 15 ವರ್ಷ ನೀವೇ ಅಧಿಕಾರ ಮಾಡಿ ಎಂದು ಸಲಹೆ ಕೊಟ್ಟರು. ತಮ್ಮನಾಗಿ ಅಣ್ಣನ ಮಾತು ಕೇಳಿ. ಸಾಕು ಇಲ್ಲಿವರೆಗೂ ಲೂಟಿ ಹೊಡೆದಿರೋದು. ಇನ್ನು ಲೂಟಿ ಹೊಡೆಯೋದು ನಿಲ್ಲಿಸಿ. ಜನರ ಬದುಕನ್ನ ಕಟ್ಟಿಕೊಡಪ್ಪ. ಇನ್ನು 10 ವರ್ಷ ನೀನೇ ಡಿಸಿಎಂ, ಸಿಎಂ ಆಗಿ ಇದ್ದು ಬಿಡಿ. ಲೂಟಿ ಹೊಡೆಯೋದನ್ನ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಿ. ಈ ಸಲಹೆಯನ್ನು ಒಪ್ಪಿಕೊಂಡರೆ ನಾನು ಡಿಕೆ ಶಿವಕುಮಾರ್ ರನ್ನ ತಮ್ಮ ಅಂತ ಒಪ್ಪಿಕೊಳ್ತೀನಿ ಅಂತ ಷರತ್ತು ವಿಧಿಸಿದರು.
Web Stories