ರಾಯಚೂರು: ಎಲ್ಲರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಎನ್ನುವ ಆಸೆ ಇರುತ್ತದೆ. ಹಾಸನದಲ್ಲಿ (Hassan) ಭವಾನಿ ರೇವಣ್ಣ (Bhavani Revanna) ಸ್ಪರ್ಧಿಸುವ ಅನಿವಾರ್ಯತೆಯಿಲ್ಲ, ಅನಿವಾರ್ಯ ಇದ್ದಿದ್ದರೇ ನಾನೇ ನಿಲ್ಲಿಸ್ತಿದ್ದೆ ಎಂದು ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.
ಪಂಚರತ್ನಯಾತ್ರೆ ಹಿನ್ನೆಲೆಯಲ್ಲಿ ರಾಯಚೂರು ಪ್ರವಾಸದಲ್ಲಿರುವ ಹೆಚ್‌ಡಿಕೆ ದೇವದುರ್ಗದ ಗಾಣಧಾಣದಲ್ಲಿ ಮಾತನಾಡಿ, ಹಾಸನ ಕ್ಷೇತ್ರದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಅಲ್ಲಿ ಈಗ ಅನಿವಾರ್ಯತೆ ಇಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ನಿಲ್ಲಿಸಲು ಕಾರಣವಿದೆ ಎಂದರು.
Advertisement
Advertisement
ವೀರಭದ್ರಯ್ಯ ಅವರನ್ನ ಅಭ್ಯರ್ಥಿ ಎನ್ನುವ ತೀರ್ಮಾನ ಆಗಿತ್ತು. ಅವರು ಸರ್ಕಾರಿ ಅಧಿಕಾರಿಯಾಗಿದ್ದರು. ಅವರ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಲಿಲ್ಲ. ಹಾಗಾಗಿ ಅಭ್ಯರ್ಥಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಮೂರ್ನಾಲ್ಕು ಸೀಟ್ ಗೆಲ್ಲಬೇಕಿತ್ತು. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದೆ. ನಂತರ ವೀರಭದ್ರಯ್ಯ ಅವರಿಗೆ ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನನ್ನಿಂದ ಡಿಕೆಶಿ ರಾಜಕಾರಣ ಅಂತ್ಯ ಆಗುತ್ತೆ: ರಮೇಶ್ ಜಾರಕಿಹೊಳಿ ಗುಡುಗು
Advertisement
Advertisement
ನಮ್ಮ ಕುಟುಂಬದಲ್ಲಿ ಸಂಘರ್ಷ ನಡೆಯುತ್ತಿದೆ ಅನ್ನೋದೇನಿಲ್ಲ, ನನಗೆ ಕಾರ್ಯಕರ್ತರೇ ಕುಟುಂಬಸ್ಥರು. ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನು ನಾನೇ ನಿಲ್ಲಿಸುತ್ತಿದ್ದೆ. ಇಲ್ಲಿ ಕುಟುಂಬ ರಾಜಕಾರಣ ಇಲ್ಲ. ಗೊಂದಲವಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಅವಶ್ಯಕತೆಯಿದ್ದರೇ ಕಾರ್ಯಕರ್ತರಿಗಾಗಿ ತಲೆಕೊಡುತ್ತೇವೆ. ಇಲ್ಲಿನ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮತದಾನ ಅಧಿಕಾರ ಮಾತ್ರವಲ್ಲ, ಕರ್ತವ್ಯವೂ ಹೌದು: ಗೆಹ್ಲೋಟ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k