ರಾಮನಗರ: ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಗೆಲ್ಲದಿದ್ದರೆ ಗ್ಯಾರಂಟಿ ರದ್ದು ಮಾಡುತ್ತೇವೆ ಎಂಬ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H. D. Kumaraswamy) ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬ್ಲಾಕ್ ಮೇಲ್ ರಾಜರಾರಣ ಎಂಬುದರಲ್ಲಿ ಸಂಶಯವಿಲ್ಲ. ಅವರ ಮಾತಿಗೆ ಪ್ರಾಶಸ್ತ್ಯ ಕೊಡುವುದು ಅನಾವಶ್ಯಕ. ಚುನಾವಣೆ ವೇಳೆ 3 ಸಾವಿರ ರೂ. ಬೆಲೆ ಬಾಳುವ ಗಿಫ್ಟ್ ಕೊಡ್ತೀವಿ ಎಂದು ಅಮಾಯಕ ಹೆಣ್ಣುಮಕ್ಕಳನ್ನ ನಂಬಿಸಿದ್ದರು. ಗಿಫ್ಟ್ ಕಾರ್ಡ್ ಕೊಟ್ಟು ಜನರನ್ನ ವಂಚಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳು ಅದೇ ರೀತಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಕ್ತಿ ಮುಖ್ಯ ಅಂದಿದ್ದಾರಷ್ಟೇ- ಸಿಎಂ ಪರ ರಾಮಲಿಂಗಾ ರೆಡ್ಡಿ ಬ್ಯಾಟಿಂಗ್
Advertisement
Advertisement
ಈ ಗ್ಯಾರಂಟಿಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಇರಲಿದೆ. ಪಕ್ಷದ ವೇದಿಕೆಯಲ್ಲಿ ಅಗಿರುವ ಚರ್ಚೆ ಬಗ್ಗೆ ಬಾಲಕೃಷ್ಣ ಅವರು ಜನರ ಎದುರೇ ಹೇಳಿದ್ದಾರೆ. ಅವರೆಲ್ಲ ಇದನ್ನ ಚರ್ಚೆ ಮಾಡಿದ್ದಾರೆ. ಲೋಕಸಭಾ ಚುನಾವಣೆವರೆಗೂ ಗ್ಯಾರಂಟಿ ಕೊಡೋಣ, ಬಳಿಕ ನಿಲ್ಲಿಸೋಣ ಎಂಬ ಚರ್ಚೆ ಆಗಿದೆ. ಅವರ ಒಳಗಡೆಯ ಚರ್ಚೆ ಇಲ್ಲಿ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ನನ್ನ ಅಭಿಪ್ರಾಯದಲ್ಲಿ ಸಮರ್ಪಕವಾಗಿ ಗ್ಯಾರಂಟಿ ಕೊಡಲು ಅವಕಾಶ ಇದೆ. ಅದೇನು ಅಂತಹ ದೊಡ್ಡ ಕಾರ್ಯಕ್ರಮ ಅಲ್ಲ. ಕೊಡಲು ಸಮಸ್ಯೆಯೂ ಇಲ್ಲ. ಸರಿಯಾದ ಮಾರ್ಗದಲ್ಲಿ ಹೋಗಿದ್ದರೆ, ಈ ಐದು ಗ್ಯಾರಂಟಿಗಳನ್ನು ಕೊಟ್ಟು, ರಾಜ್ಯದ ಅಭಿವೃದ್ಧಿ ಸಹ ಮಾಡಬಹುದಿತ್ತು ಎಂದಿದ್ದಾರೆ.
ಅಕ್ಷತೆ ನೀಡಿ ಮತ ಕೇಳುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ (BJP) ಅಕ್ಷತೆಗೆ ಮತ ಹಾಕೊದಾದರೆ ಅದನ್ನು ನೀವು ಶುರುಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ಕೊಟ್ಟಿದ್ದಾರೆ. ಅಕ್ಷತೆ ಕಾಳು ಕೊಟ್ಟರು ಎಂದು ಜನ ಮತ ಹಾಕಿದರೆ, ನೀವು ಕೊಡಿ. ನಾವು ಅಕ್ಷತೆ ಕೊಡ್ತೀವಿ ಮತ ಹಾಕಿ ಎಂದು ಕೇಳಿ. ಅವರ ಅಕ್ಷತೆಗೆ ಜನ ಮತ ಹಾಕಿದರೆ ನಿಮ್ಮ ಅಕ್ಷತೆಗೆ ಜನ ನೀಡುವುದಿಲ್ಲವೇ? ನೀವೂ ಒಂದು ಪ್ರಯೋಗ ಮಾಡಿ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಬಡವರಿಗೆ 2 ಕೋಟಿ ಮನೆ ಮೋದಿ ಸರ್ಕಾರದ ಗ್ಯಾರಂಟಿ: ಪ್ರಹ್ಲಾದ್ ಜೋಶಿ