ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುತ್ತಾರೆ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಹೀಗಾಗಿ ಸೂರ್ಯಾಸ್ತವಾದ ನಂತರ ಬಿಸಿಲಿನಿಂದ ತಂಪಾಗುವ ಪಾನೀಯವನ್ನು ಕುಡಿಯಿರಿ. ನಿಮಗಾಗಿ ಕುಲ್ಕಿ ಶರಬತ್ ಮಾಡುವ ವಿಧಾನ ಇಲ್ಲದೆ….
ಬೇಕಾಗುವ ಸಾಮಗ್ರಿಗಳು
1. ನಿಂಬೆ ಹಣ್ಣು – 1
2. ಉಪ್ಪು – ರುಚಿಗೆ ತಕ್ಕಷ್ಟು
3. ಹಸಿ ಮೆಣಸಿನಕಾಯಿ
4. ಐಸ್ ಕ್ಯೂಬ್
Advertisement
Advertisement
ಮಾಡುವ ವಿಧಾನ
* ಒಂದು ಗ್ಲಾಸ್ ನಲ್ಲಿ ಅರ್ಧದಷ್ಟು ನೀರು ಹಾಕಿ.
* ಈಗ ನಿಂಬೆ ರಸ, ಐಸ್ ಕ್ಯೂಬ್ ಮತ್ತು ಉದ್ದಕ್ಕೆ ಸೀಳಿರುವ ಹಸಿ ಮೆಣಸಿನಕಾಯಿ ಹಾಕಿ.
* ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೊಂದು ದೊಡ್ಡ ಗ್ಲಾಸ್ ನಿಂದ ಜ್ಯೂಸ್ ಗ್ಲಾಸ್ ಮುಚ್ಚಿ ಮೇಲಿಂದ ಕೆಳಕ್ಕೆ ಚೆನ್ನಾಗಿ ಕಲಕಿದ್ರೆ ಕೂಲ್ ಕೂಲ್ ಕುಲ್ಕಿ ಶರಬತ್ ರೆಡಿ.
Advertisement