ನಾಟಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್‍ದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದು, ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಬೌಲರ್ ಎಂಬ ವಿಶ್ವದಾಖಲೆಯನ್ನು ಬರೆದಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದ ಬ್ರಾಡ್ ಹಾಗ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 32 ರನ್ ನೀಡಿ 5 ವಿಕೆಟ್ ಪಡೆದಿದ್ದು ಇದೂವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
Advertisement
ಸದ್ಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕುಲ್ ದೀಪ್ ಯಾದವ್ ತೋರಿದ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ನಾಯಕ ಕೊಹ್ಲಿ, ಮುಂದಿನ ಟೆಸ್ಟ್ ಟೂರ್ನಿಯಲ್ಲಿ ಸ್ಥಾನ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಟೆಸ್ಟ್ ಟೂರ್ನಿಗೆ ಅಂತಿಮ ತಂಡವನ್ನು ಈ ವಾರಂತ್ಯದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸುವ ಸಾಧ್ಯತೆ ಇದೆ.
Advertisement
Advertisement
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಿಸಿರುವ ಟೀಂ ಇಂಡಿಯಾ ಸರಣಿ ಗೆಲ್ಲುವ ವಿಶ್ವಾಸ ಮೂಡಿಸಿದೆ. ಇನ್ನು 21 ನೇ ಏಕದಿನ ಪಂದ್ಯವನ್ನು ಆಡಿದ ಕುಲ್‍ದೀಪ್ ಯಾದವ್ ಈ ಹಿಂದಿನ ತಮ್ಮ ಸಾಧನೆಯನ್ನು ಉತ್ತಮ (23 ರನ್ ಗೆ 4 ವಿಕೆಟ್) ಪಡಿಸಿಕೊಂಡಿದ್ದಾರೆ.
Advertisement
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಇಂಗ್ಲೆಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಕಬಳಿಸಿದ ಮೊದಲ ಎಡಗೈ ಬೌಲರ್ ಎಂಬ ಹೆಗ್ಗಳಿಕೆ ಕುಲ್ ದೀಪ್ ಯಾದವ್ ಪಡೆದಿದ್ದು, ಟೀಂ ಇಂಡಿಯಾ ಪರ 6 ವಿಕೆಟ್ ಕಿತ್ತ ನಾಲ್ಕನೇ ಬೌಲರ್ ಆಗಿದ್ದಾರೆ.
Kuldeep Yadav becomes the first ever left-arm wrist-spinner to take SIX wickets in an ODI.
Also the best figures by any left-arm spinner in ODI history. #EngvInd
— Bharath Seervi (@SeerviBharath) July 12, 2018
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 137 ರನ್ ( 15 ಬೌಂಡರಿ, 4 ಸಿಕ್ಸರ್) ಸಿಡಿಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆಟಗಾರ ಏಕದಿನ ಮಾದರಿಯಲ್ಲಿ ಗಳಿಸಿದ ಗರಿಷ್ಠ ರನ್ ಎಂಬ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ 107 ರನ್ ಗಳಿಸಿದ್ದರು. ಅಲ್ಲದೇ ಶರ್ಮಾ ಇದುವರೆಗೂ 18 ಶತಕಗಳನ್ನು ಗಳಿಸಿದ್ದು, ಅದರಲ್ಲಿ 16 ಆರಂಭಿಕರಾಗಿಯೇ ಕಣಕ್ಕಿಳಿದು ಶತಕ ಗಳಿಸಿದ್ದಾರೆ.
ವಿಶೇಷವಾಗಿ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 167 ರನ್ ಜೊತೆಯಾಟ ನೀಡಿದ್ದು, ಈ ಮೂಲಕ ರೋಹಿತ್ ಜೋಡಿ 14 ಬಾರಿ 100 ಪ್ಲಸ್ ರನ್ ಜೊತೆಯಾಟ ನೀಡಿದ ಆಟಗಾರರು ಎನಿಸಿಕೊಂಡಿದ್ದಾರೆ. ಈ ಹಿಂದೆ ಟೀ ಇಂಡಿಯಾ ಪರ ಸಚಿನ್ ಹಾಗೂ ಸೌರವ್ ಗಂಗೂಲಿ 26 ಬಾರಿ 100 ಪ್ಲಸ್ ಜೊತೆಯಾಟ ನೀಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಬೇನ್ ಸ್ಟೋಕ್ಸ್ 102 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದು ಕಳೆದ 13 ವರ್ಷಗಳಲ್ಲಿ ಇಂಗ್ಲೆಂಡ್ ಪರ ದಾಖಲಾದ ನಿಧಾನಗತಿಯ ಅರ್ಧ ಶತಕ ಎನಿಸಿಕೊಂಡಿದೆ.
Kuldeep Yadav's 6 for 25:
– Best figures by a left-arm spinner
– Best figures by a spinner v Eng
– Fourth best figures for India#EngvInd
— Bharath Seervi (@SeerviBharath) July 12, 2018
That's a FIFTY for Hitman in 54 deliveries.
This is his 35th in ODI cricket.
Follow the game here – https://t.co/iWWklQz7H3 #ENGvIND pic.twitter.com/AkLSimzDI4
— BCCI (@BCCI) July 12, 2018