* 6 ಸಾವಿರ ರೂ. ಇದ್ದ ಪಂಚಾಮೃತ ಮಹಾಭಿಷೇಕ ಸೇವೆಗೆ ಇನ್ಮುಂದೆ 11 ಸಾವಿರ ರೂ.
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ (Kukke Subramanya Temple) ಸೇವೆಗಳ ದರ ಪರಿಷ್ಕರಣೆ ಆಗಿದೆ.
ಪಂಚಾಮೃತ ಮಹಾಭಿಷೇಕ ಸೇವೆಯ ದರ ಏರಿಕೆಯಾಗಿದ್ದು, 6 ಸಾವಿರ ರೂ. ಇದ್ದ ಸೇವೆ ಇನ್ಮುಂದೆ 11 ಸಾವಿರ ರೂ. ಆಗಿದೆ. ಜೊತೆಗೆ ಹೊಸದಾಗಿ ಬೆಳ್ಳಿ ರಥೋತ್ಸವ ಸೇವೆ ಆರಂಭಿಸಲಾಗಿದೆ.
ಬೆಳ್ಳಿ ರಥೋತ್ಸವ ಸೇವೆಗೆ 12 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜೇಷ್ಠ ಮಾಸದ ಶುದ್ಧ ಷಷ್ಠಿವರೆಗೆ ಸೇವೆಗೆ ಅವಕಾಶ ಇದೆ. ಪ್ರತಿ ತಿಂಗಳ ನಿಗದಿತ 10 ದಿನಗಳಲ್ಲಿ ಬೆಳ್ಳಿ ರಥೋತ್ಸವ ಸೇವೆ ನಡೆಸಲು ಅವಕಾಶವಿದೆ.
