ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜುಲೈ 5 ರಿಂದ ಸಂಜೆಯ ಕಾಲದಲ್ಲೂ ಆಶ್ಲೇಷ ಬಲಿ ಸೇವೆ ಪೂಜೆ ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಕ್ಷೇತ್ರದಲ್ಲಿ ಬೆಳಗ್ಗೆ ಮಾತ್ರ ಆಶ್ಲೇಷ ಬಲಿ ಸೇವೆ ನಡೆಸಲಾಗುತ್ತಿತ್ತು. ಪ್ರತಿದಿನ 500ಕ್ಕೂ ಮಿಕ್ಕಿದ ಸೇವೆಗಳು ಇಲ್ಲಿ ನಡೆಯುತ್ತಿದ್ದು, ರಜಾ ದಿನಗಳಲ್ಲಿ ಇದು 1,400 ದಾಟುತ್ತದೆ. ಭಕ್ತರು ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಆಶ್ಲೇಷ ಬಲಿ ಸೇವೆ ನಡೆಸಲು ನಿರ್ಧರಿಸಲಾಗಿದೆ.
Advertisement
ಸಂಜೆ ಕ್ಷೇತ್ರದಲ್ಲಿ ದೀವಟಿಗೆ ಪೂಜೆ ಆಗುವುದಕ್ಕೆ ಮುಂಚಿತವಾಗಿ ಒಂದು ಪಾಳಿಯಲ್ಲಿ ಸೇವೆ ನೆರವೇರಿಸಲು ತೀರ್ಮಾನಿಸಲಾಗಿದೆ. ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ, ಇತ್ಯಾದಿ ಉಪವಾಸ ದಿನಗಳು ಮತ್ತು ವಾರ್ಷಿಕ ಜಾತ್ರಾ ಸಮಯ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಸಾಯಂಕಾಲದ ಆಶ್ಲೇಷ ಬಲಿ ಸೇವೆಯು ನಡೆಯಲಿದೆ.
Advertisement